ಶುದ್ದ ಮನಸ್ಸು, ಪ್ರಾಮಾಣಿಕ ಸೇವೆಯಿಂದ ಎಲ್ಲವು ಯಶಸ್ಸು – ಈಶ್ವರ ಭಟ್ ಪಂಜಿಗುಡ್ಡೆ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಮತ್ತು ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ಗ್ರಾಮ ಗ್ರಾಮಗಳಲ್ಲಿ ದೇವರ ಭಕ್ತ ಸಮಿತಿ ರಚನೆಯಾಗುತ್ತಿತ್ತು. ಇದೀಗ 17ನೇ ಭಕ್ತ ಸಮಿತಿಯು ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಸೆ.16ರಂದು ನಡೆಯಿತು.
ಶ್ರೀ ಮಹಾಲಿಂಗೇಶ್ವರ ದೇವರ ಭಕ್ತ ಸಮಿತಿ ಸಭೆಯನ್ನು ಉದ್ಘಾಟಿಸಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಮಾತನಾಡಿ, ಶುದ್ಧ ಮನಸ್ಸು ಹಾಗೂ ಪ್ರಾಮಾಣಿಕ ಕೈಂಕರ್ಯ ಕೈಗೊಂಡಾಗ ಎಲ್ಲವು ಯಶಸ್ವಿಯಾಗಿ ಪ್ರವಹಿಸುತ್ತದೆ ಎಂಬುದಕ್ಕೆ ನಮ್ಮ ವ್ಯವಸ್ಥಾಪನಾ ಸಮಿತಿಯೇ ಮಾದರಿ. ದೇವಸ್ಥಾನದ ಅಭಿವೃದ್ಧಿಯಗಬೇಕು. ಜೀರ್ಣೋದ್ದಾರಗೊಳ್ಳಬೇಕು ಎಂಬುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲೇ ಶಾಸಕರ ಮಾರ್ಗದರ್ಶನದಂತೆ ಗ್ರಾಮ ಗ್ರಾಮಗಳಲ್ಲಿ ಸಮಿತಿ ರಚನೆ ಮಾಡುತ್ತಿದ್ದೇವೆ. ಎಲ್ಲಾ ಕಡೆ ದೇವರ ಕಾರ್ಯಕ್ಕೆ ಉತ್ತಮ ಸ್ಪಂಧನೆ ದೊರೆತಿದೆ ಎಂದರು.
ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಉಮಾಮಹೇಶ್ವರ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷ ಜಯರಾಮ ಕೆದಿಲಾಯ ಶಿಬರ, ಅಧ್ಯಕ್ಷ ಲಕ್ಷ್ಮೀಶ ತಂತ್ರಿ ಕೆಮ್ಮಿಂಜೆ, ಉಪಾಧ್ಯಕ್ಷ ಬೆಳಿಯಪ್ಪ ಗೌಡ ಕೆದ್ಕಾರ್, ಕಾರ್ಯದರ್ಶಿ ಕೇಶವ ಪೂಜಾರಿ ಮುಕ್ವೆ, ಕೋಶಾಧಿಕಾರಿ ನವೀನ್ ರೈ ಶಿಬರ, ಸದಸ್ಯರಾದ ಸುಜಯ್ ತಂತ್ರಿ ಕೆಮ್ಮಿಂಜೆ, ಪ್ರಸನ್ನ ಭಟ್ ಪಂಚವಟಿ, ಗಿರೀಶ್ ರೈ ಮಣಿಯ, ರವಿ ಮಣಿಯ, ಸುಧೀರ್ ಹೆಬ್ಬಾರ್ ಮಣಿಯ, ಪದ್ಮನಾಭ ಪೂಜಾರಿ ಬೆದ್ರಾಳ, ಮೋನಪ್ಪ ಪುರುಷ ಮುಗೇರಡ್ಕ, ಗಣೇಶ್ ಭಟ್ ಮಜಲುಮಾರು, ಗಣೇಶ್ ಶೆಟ್ಟಿ ಶಿಬರ, ಚಂದ್ರಕಲಾ ಮುಕ್ವೆ, ರಾಘವೇಂದ್ರ ನಾಯಕ್, ಅರ್ಚಕ ಪ್ರಸಾದ್ ಅಡಿಗ, ವಸಂತ ಪೂಜಾರಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಸಭೆಯಲ್ಲಿ ಭಕ್ತ ಸಮಿತಿ ರಚನೆ ಮಾಡಲಾಯಿತು.

ಸಮಿತಿ ರಚನೆ
ಶ್ರೀ ಮಹಾಲಿಂಗೇಶ್ವರ ದೇವರ ಭಕ್ತ ಸಮಿತಿ ಮಜಲುಮಾರು ಇದರ ಗೌರವಾಧ್ಯಕ್ಷರಾಗಿ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲಕ್ಷ್ಮೀಶ ತಂತ್ರಿಯವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ವಸಂತ ಪೂಜಾರಿ ಕಲ್ಲರ್ಪೆ, ಉಪಾಧ್ಯಕ್ಷರಾಗಿ ಮಂಜುನಾಥ ಶೇಖ, ಚಂದ್ರಕಲಾ, ಪ್ರಧಾನ ಕಾರ್ಯದರ್ಶಿಯಾಗಿ ಚೆನ್ನಪ್ಪ ಗೌಡ, ಜೊತೆ ಕಾರ್ಯದರ್ಶಿಯಾಗಿ ವಿಶ್ವನಾಥ ಪುರುಷ ಅವರನ್ನು ಆಯ್ಕೆ ಮಾಡಲಾಗಿದ್ದು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಘೋಷಣೆ ಮಾಡಿದರು. ಭಕ್ತ ಸಮಿತಿಯ ನೂತನ ಪದಾಧಿಕಾರಿಗಳಿಗೆ ಮಹಾಲಿಂಗೇಶ್ವರ ದೇವಸ್ಥಾನದ ಗೌರವಾರ್ಥವಾಗಿ ಶಲ್ಯ ತೊಡಿಸಿ ಗೌರವಿಸಲಾಯಿತು.