ಕೊಂಬೆಟ್ಟು ಮಹಿಳಾ ವೇದಿಕೆ, ಮರಾಟಿ ಯುವ ವೇದಿಕೆಗಳ ಮಹಾಸಭೆ

0

ಪುತ್ತೂರು: ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಇದರ ಸಹ ಸಂಸ್ಥೆಗಳಾದ ಮರಾಟಿ ಮಹಿಳಾ ವೇದಿಕೆ ಮತ್ತು ಮರಾಟಿ ಯುವ ವೇದಿಕೆಗಳ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.17ರಂದು ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ನಡೆಯಿತು.


ಮುಖ್ಯ ಅತಿಥಿಯಾಗಿದ್ದ ಪೆರುವಾಯಿ ಸೇಡಿಗುಳಿ ಸ.ಕಿ.ಪ್ರಾ. ಶಾಲಾ ಮುಖ್ಯಗುರು ರಾಮ ನಾಯ್ಕ ಮಾತನಾಡಿ, ಯುವ ವೇದಿಕೆಯ ಸಾಮಾಜಿಕ ಕಳಕಳಿಯ ಸೇವ ಕಾರ್ಯಗಳನ್ನು ಶ್ಲಾಘಿಸಿದರು. ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕರುಣಾಕರ ನಾಯ್ಕ್ ಪಾಂಗ್ಲಾಯಿ ಅಧ್ಯಕ್ಷತೆ ವಹಿಸಿದ್ದರು. ಮರಾಟಿ ಮಹಿಳಾ ವೇದಿಕೆಯ ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ ಉಪ್ಪಳಿಗೆ ಮತ್ತು ಯುವ ವೇದಿಕೆ ಅಧ್ಯಕ್ಷ ವಸಂತ ಆರ್ಯಾಪು ಮಾತನಾಡಿ, ಸಂಘದ ಕಾರ್ಯಕ್ರಮಗಳಿಗೆ ಸಹಕರಿಸಿ, ಪ್ರೋತ್ಸಾಹಿಸಿದ ಸಮಾಜ ಬಾಂಧವರಿಗೆ ಕೃತಜ್ಞತೆ ಅರ್ಪಿಸಿದರು.


ಅಭಿನಂದನೆ:
ಮರಾಟಿ ಯುವ ವೇದಿಕೆಯಿಂದ ಕ್ರೀಡಾಪಟು ದೀಕ್ಷಿತಾ ಆರಂಭ್ಯ ಕೌಡಿಚ್ಚಾರು ಹಾಗೂ ಮರಾಟಿ ಮಹಿಳಾ ವೇದಿಕೆಯಿಂದ ಪ್ರಗತಿಪರ ಕೃಷಿಕೆ ಚಂದ್ರಾವತಿ ಅಜಿಲಡ್ಕ ಇವರನ್ನು ಅಭಿನಂದಿಸಲಾಯಿತು. ಮರಾಟಿ ಯುವ ರಕ್ತ ನಿಧಿಯ ರಕ್ತದಾನಿಗಳಾದ ಅಶೋಕ್ ಸೇರ್ತಾಜೆ, ಅಶೋಕ್ ನಾಯ್ಕ್ ಸೊರಕೆ, ಜಗದೀಶ್ ಎಲಿಕ, ನವೀನ್ ಕುಮಾರ್ ಕೆ, ಸಂದೀಪ್ ಆರ್ಯಾಪು, ಯತೀಶ್ ಕುಮಾರ್ ಪುಣ್ಚಪ್ಪಾಡಿ, ಜಿಡೆಕಲ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ದಿ ಸಮಿತಿಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಮರಾಟಿ ಸಮಾಜ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ದುಗ್ಗಪ್ಪ ನಾಯ್ಕ್ ಬಡಾವು ಇವರನ್ನು ಗೌರವಿಸಲಾಯಿತು.


ಮರಾಟಿ ಸಮಾಜ ಸೇವಾ ಸಂಘದ ಕಾರ್ಯದರ್ಶಿ ರಾಮ ನಾಯ್ಕ್ ಗೆಣಸಿನಕುಮೇರು, ಖಜಾಂಚಿ ಈಶ್ವರ ನಾಯ್ಕ್, ಮಹಿಳಾ ವೇದಿಕೆ ಖಜಾಂಚಿ ಲಲಿತಾ ಅಶೋಕ್ ಬಲ್ನಾಡು, ಯುವ ವೇದಿಕೆ ಖಜಾಂಚಿ ಜಗದೀಶ್ ಎಲಿಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾತೃ ಸಂಘದ ಮಾಜಿ ಅಧ್ಯಕ್ಷ ಮಂಜುನಾಥ ಎನ್.ಎಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಹಿಳಾ ವೇದಿಕೆಯ ಕಾರ್ಯದರ್ಶಿ ವಸಂತಿ ಪಿ.ಕೆ, ಯುವ ವೇದಿಕೆಯ ಜೊತೆ ಕಾರ್ಯದರ್ಶಿ ಅಶ್ವಿನಿ ಸಿ.ಎಚ್ ಚಾಕೋಟೆ ವಾರ್ಷಿಕ ವರದಿ ವಾಚಿಸಿದರು. ಮಹಿಳಾ ವೇದಿಕೆಯ ಯಶೋಧಾ ಕೃಷ್ಣ ನಾಯ್ಕ ಪ್ರಾರ್ಥಿಸಿದರು. ಗಂಗಾಧರ ಕೌಡಿಚ್ಚಾರು ಸ್ವಾಗತಿಸಿ, ಲಲಿತಾ ಅಶೋಕ್ ಬಲ್ನಾಡು ವಂದಿಸಿದರು. ಯಶಸ್ವಿನಿ ಸಾಲ್ಮರ ಮತ್ತು ಪೂರ್ಣಿಮಾ ಪುರುಷರಕಟ್ಟೆ ಕಾರ್ಯಕ್ರಮ ನಿರೂಪಿಸಿದರು.


ಮನೋರಂಜನಾ ಕಾರ್ಯಕ್ರಮ
ಸಭಾ ಕಾರ್ಯಕ್ರಮದ ಬಳಿಕ ಸಮಾಜದ ಮಕ್ಕಳಿಂದ ಫಿಲ್ಮ್ ಡ್ಯಾನ್ಸ್, ಭರತನಾಟ್ಯ, ನೃತ್ಯ ರೂಪಕ, ಯಕ್ಷಗಾನ ನೃತ್ಯ, ಹಾಡು, ಮಹಿಳಾ ವೇದಿಕೆಯ ಸದಸ್ಯರಿಂದ ತುಳು ಜಾನಪದ ನೃತ್ಯ, ಕಿರು ನಾಟಕ ಯುವ ವೇದಿಕೆಯ ಸದಸ್ಯರು ಫಿಲ್ಮ್ ಡ್ಯಾನ್ಸ್ ಹಾಗೂ ಕುಸಲ್‌ಡ್ ಒಂತೆ ಅಸಲ್ ಪ್ರಹಸನ ನೆರವೇರಿತು.

LEAVE A REPLY

Please enter your comment!
Please enter your name here