ಪುತ್ತೂರು:ಸಾಮಾಜಿಕ ಜಾಲತಾಣದಲ್ಲಿ ಯುವತಿಗೆ ಕಮೆಂಟ್ ಮಾಡಿರುವುದಾಗಿ ಆರೋಪಿಸಿ, ಯುವತಿ ಆತನನ್ನು ಪ್ರಶ್ನಿಸಿದ ಮತ್ತು ಇದೇ ವೇಳೆ ಕೆಲವರು ಆತನಿಗೆ ಹಲ್ಲೆ ನಡೆಸಿದ ಘಟನೆ ಸೆ.17ರಂದು ರಾತ್ರಿ ಪುತ್ತೂರು ಬಸ್ನಿಲ್ದಾಣದ ಬಳಿ ನಡೆದಿದೆ.
ಯುವತಿಯು ಬಸ್ ನಿಲ್ದಾಣದಲ್ಲಿದ್ದ ಸಂದರ್ಭ ಆಕೆಗೆ ವ್ಯಕ್ತಿಯೋರ್ವ ಮೊಬೈಲ್ನಲ್ಲಿ ಕಮೆಂಟ್ ಮಾಡಿರುವುದಾಗಿ ಆರೋಪಿಸಿ ಹಲ್ಲೆ ನಡೆದಿದೆ.ಹಲ್ಲೆಗೊಳಗಾದ ವ್ಯಕ್ತಿ ಬಲ್ನಾಡು ನಿವಾಸಿ ಎನ್ನಲಾಗಿದೆ.ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಬಂದಾಗ,ಹಲ್ಲೆಗೊಳಗಾದ ವ್ಯಕ್ತಿ ಆಸ್ಪತ್ರೆಗೆ ತೆರಳಿದ್ದು,ಪೊಲೀಸರು ಹಿಂದಿರುಗಿದ್ದಾರೆ.