ಉಪ್ಪಿನಂಗಡಿ: ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಮತ್ತು ಎಸ್.ಎಸ್. ಪಿ.ಯು ಕಾಲೇಜು ಸುಬ್ರಹ್ಮಣ್ಯ ಇವರ ಜಂಟಿ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಸ್ಥಾನವನ್ನು ಪಡೆದಿದೆ.

ತಂಡದಲ್ಲಿ ದ್ವಿತೀಯ ಪಿಯುಸಿಯ ಸೌರವ್ ಜಿ ಆಳ್ವ(ನಾಯಕ), ಸಾತ್ವಿಕ್ ಬಿ. ನಾಯಕ್, ಅಝ್ಮತುಲ್ ಮುಹೀಝ್, ಅಹಮ್ಮದ್ ಶಾ ನವೀದ್, ಶಯನ್ ಶರೀಖ್, ಪ್ರಾಂಜಲ್, ಅಬ್ದುಲ್ ಸರೀಝ್, ಪ್ರಥಮ ಪಿ.ಯು.ಸಿಯ ಅಕ್ಷಜ್ ಶೆಟ್ಟಿ, ಆಕಾಶ್, ಜಿತೇಶ್, ತನ್ವಿತ್, ಪುನೀತ್ ಕುಮಾರ್, ಶಿಖರ್ ಎಸ್. ಶೆಟ್ಟಿ ಭಾಗವಹಿಸಿದ್ದಾರೆ. ಇವರಲ್ಲಿ ಪ್ರಥಮ ಪಿಯು.ಸಿ ವಿದ್ಯಾರ್ಥಿಗಳಾದ ಅಕ್ಷಜ್ ಶೆಟ್ಟಿ ಹಾಗೂ ಆಕಾಶ್ ರೈ ರಾಜ್ಯ ಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ಪಂದ್ಯಾಟದಲ್ಲಿ ಉತ್ತಮ ಹಿಡಿತಗಾರನಾಗಿ ಅಕ್ಷಜ್ ಶೆಟ್ಟಿ ಆಯ್ಕೆಯಾಗಿರುತ್ತಾರೆ. ಇವರಿಗೆ ಸಂಸ್ಥೆಯದೈಹಿಕ ಶಿಕ್ಷಣ ಶಿಕ್ಷಕರಾದ ಗೋಪಿನಾಥ್ ತರಬೇತಿ ನೀಡಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲ ಹೆಚ್.ಕೆ. ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.