ಪುತ್ತೂರು: ಫೇಸ್ಬುಕ್ ನಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯಾಗುವ ಕಮೆಂಟ್ ಹಾಕಿರುವ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಬ್ದುಲ್ ರಹಿಮಾನ್ ಎಂಬವರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಸೆ.18ರಂದು ರಹಿಮಾನ್ ಫೇಸ್ಬುಕ್ ನೋಡುತ್ತಿರುವಾಗ ಅದರಲ್ಲಿ ಖಾಸಗಿ ಮಾಧ್ಯಮ ಪೇಜ್ ವೊಂದು ಹಾಕಿರುವ ನ್ಯೂಸ್ ಗೆ ಹಲವರು ಕಾಮೆಂಟ್ ಗಳನ್ನು ಹಾಕಿದ್ದು, ಈ ಪೈಕಿ ಸನಾತನಿ ಸಿಂಹ ಎಂಬ ಫೇಸ್ಬುಕ್ ಪೇಜ್ ನ ವ್ಯಕ್ತಿಯು ಸಮುದಾಯಗಳ ನಡುವೆ ಕೋಮು ಸೌಹಾರ್ದತೆಗೆ ಧಕ್ಕೆಯನ್ನುಂಟು ಮಾಡುವ ರೀತಿಯಲ್ಲಿ ಕಾಮೆಂಟ್ ಹಾಕಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 131/2025 ಕಲಂ: 353(2) BNS 2023ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.