ಬಿಜೆಪಿ ರಾಜ್ಯಾಧ್ಯಕ್ಷರ ನಿಂದನೆ ಆರೋಪ – ಬಿಜೆಪಿ ನಗರಮಂಡಲದ ಅಧ್ಯಕ್ಷರ ದೂರಿಗೆ ನವೀನ್ ರೈ ಅವರ ವಿರುದ್ಧ ಪ್ರಕರಣ ದಾಖಲು

0

ಪುತ್ತೂರು: ಬಿಜೆಪಿ ರಾಜ್ಯಾಧ್ಯಕ್ಷರನ್ನು ಉದ್ದೇಶಿಸಿ ಅಶ್ಲೀಲ‌ ಪದ ಬಳಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಹರಿಯಬಿಟ್ಟ ವಿಚಾರಕ್ಕೆ ಸಂಬಂಧಿಸಿ ಪುತ್ತೂರು ಬಿಜೆಪಿ ನಗರ ಮಂಡಲದ ಅಧ್ಯಕ್ಷರು ನೀಡಿದ ದೂರಿನಂತೆ ನವೀನ್ ಕೈಕಾರ ಎಂಬವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌


ಬಿಜೆಪಿ ನಗರ ಮಂಡಲದ ಅಧ್ಯಕ್ಷರು ನೀಡಿದ ದೂರಿನಂತೆ ಅವರು ಸೆ.15 ರಂದು ಮನೆಯಲ್ಲಿದ್ದ ಸಂದರ್ಭ ಮೊಬೈಲ್ ನಲ್ಲಿ ಫೇಸ್ಬುಕ್ ನೋಡುತ್ತಿದ್ದಾಗ ನವೀನ್ ರೈ ಕೈಕಾರ ಎಂಬವರು ಆತನ ಫೇಸ್ಬುಕ್ ಪೇಜ್ ನಲ್ಲಿ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ರವರನ್ನು ಉದ್ದೇಶಿಸಿ ಅಶ್ಲೀಲವಾದ ಹಾಗೂ ಅಸಂಬಂದ್ಧವಾದ ಪದಗಳನ್ನು ಉಪಯೋಗಿಸಿ ವೀಡಿಯೋ ಮಾಡಿ ಅದನ್ನು ಪೇಸ್ ಬುಕ್ ನಲ್ಲಿ ಹರಿಯ ಬಿಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here