ಪುತ್ತೂರು: ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಕುಂಬ್ರ ಸ್ವದೇಶೀ ರೇಂಜ್ ವತಿಯಿಂದ ಇಷ್ಕ್ ಮಜ್ಲಿಸ್ ಹಾಗೂ ಮೌಲೀದ್ ಪಾರಾಯಣ ಸೆ.18ರಂದು ಸಾರೆಪುಣಿ ಜುಮಾ ಮಸೀದಿಯಲ್ಲಿ ನಡೆಯಿತು. ಕುಂಬ್ರ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ಅಧ್ಯಕ್ಷ ಹಸನ್ ಬಾಖವಿ ನೆರವೇರಿಸಿದರು.

ಸ್ಥಳೀಯ ಖತೀಬ್ ಮನ್ಸೂರ್ ರಹೀಸಿ ಉದ್ಘಾಟಿಸಿದರು. ಗಾಳಿಮುಖ ಮುದರ್ರಿಸ್ ಅದಂ ದಾರಿಮಿ ಮಜ್ಲಿಸ್ಗೆ ನೇತೃತ್ವ ನೀಡಿ ಪ್ರವಾದಿ(ಸ.ಅ) ಅವರ ಸಂದೇಶವನ್ನು ನೀಡಿದರು. ಸ್ವದೇಶಿ ರೇಂಜ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕರೀಂ ದಾರಿಮಿ ಸ್ವಾಗತಿಸಿದರು.
ಅಬ್ದುಲ್ ಶುಕೂರ್ ದಾರಿಮಿ ಪ್ರಸ್ತಾವಿಕ ಭಾಷಣ ಮಾಡಿದರು. ಕುಂಬ್ರ ರೇಂಜ್ ಅಧೀನಕ್ಕೊಳಪಟ್ಟ ಹಲವಾರು ಉಸ್ತಾದರು ಭಾಗವಹಿಸಿದ್ದರು.