ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟು ಹಬ್ಬದ ಪ್ರಯುಕ್ತ ಸವಣೂರಿನ ಪ್ರೇರಣಾ ವಿಶೇಷ ಮಕ್ಕಳ ಶಾಲೆ ಹಾಗೂ ವಸತಿ ನಿಲಯ ಪ್ರೇರಣಾ ಹಿರಿಯರ ನಾಗರಿಕರ ಸೇವಾಶ್ರಮಕ್ಕೆ ಸವಣೂರು ಯುವಕ ಮಂಡಲ ಇದರ ಸದಸ್ಯರು ಭೇಟಿ ನೀಡಿ ಸಿಹಿ ತಿಂಡಿ ವಿತರಿಸಿ ಸಹಾಯ ಧನ ನೀಡಿದರು.

ಯುವಕ ಮಂಡಲದ ಅಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಕಾರ್ಯದರ್ಶಿ ರಾಜೇಶ್ ಇಡ್ಯಾಡಿ ಮಾರ್ಗದರ್ಶಕ ಗಿರಿಶಂಕರ ಸುಲಾಯ, ನಿಕಟಪೂರ್ವಾಧ್ಯಕ್ಷರಾದ ತಾರನಾಥ ಕಾಯರ್ಗ, ಸಚಿನ್ ಸವಣೂರು, ಮಾಜಿ ಕಾರ್ಯದರ್ಶಿಗಳಾದ ಸತೀಶ್ ಬಲ್ಯಾಯ, ಜಗದೀಶ್ ಇಡ್ಯಾಡಿ, ಕೀರ್ತನ್ ಕೋಡಿಬೈಲು, ಸದಸ್ಯರಾದ ರಾಮಕೃಷ್ಣ ಪ್ರಭು, ಶೈಲೇಶ್ ಉಪಸ್ಥಿತರಿದ್ದರು.