ಪುತ್ತೂರು: ಸಂಪ್ಯದಲ್ಲಿ ಸೆ.21ರಂದು ಲೋಕಾರ್ಪಣೆಗೊಳ್ಳಲಿರುವ ಮೆಡ್ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಯ್ಯದ್ ಕೆ.ಎಸ್ ಅಲೀ ತಂಙಳ್ ಕುಂಬೋಳ್ ಸೆ.19ರಂದು ಭೇಟಿ ನೀಡಿ ಆಸ್ಪತ್ರೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮೆಡ್ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಚೇರ್ಮೆನ್ ಡಾ.ಅಶ್ರಫ್ ಕಮ್ಮಾಡಿಯವರು ತಂಙಳ್ ಅವರನ್ನು ಸ್ವಾಗತಿಸಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಮೆಡ್ಲ್ಯಾಂಡ್ ಆಸ್ಪತ್ರೆಯ ಕಾನೂನು ಸಲಹೆಗಾರ ಅಡ್ವೊಕೇಟ್ ಮೂಸಕುಂಞಿ ಪೈಂಬಚ್ಚಾಲ್, ಮ್ಯಾನೇಜಿಂಗ್ ಡೈರೆಕ್ಟರ್ ಆಶ್ಮೀರ್ ಕಮ್ಮಾಡಿ, ಪಿಆರ್ಓ ರಝಾಕ್ ಸಾಲ್ಮರ ಉಪಸ್ಥಿತರಿದ್ದರು.