ಸೆ.21,22: ರೆಂಜಲಾಡಿ ಇಸ್ಲಾಮಿಕ್ ಸೆಂಟರ್ ಆಶ್ರಯದಲ್ಲಿ ಗ್ರ್ಯಾಂಡ್ ಮಿಲಾದ್ ಕಾನ್ಫರೆನ್ಸ್ – ಸೌಹಾರ್ದ ಸಂಗಮ, ದಫ್ ಪ್ರದರ್ಶನ, ಕಥಾ ಪ್ರಸಂಗ

0

ಪುತ್ತೂರು: ರೆಂಜಲಾಡಿ ಇಸ್ಲಾಮಿಕ್ ಸೆಂಟರ್ ಆಶ್ರಯದಲ್ಲಿ ‘ಜಲ್ಸೇ ರಬೀಹ್’ ಗ್ರ್ಯಾಂಡ್ ಮಿಲಾದ್ ಕಾನ್ಫರೆನ್ಸ್ ಸೆ.21 ಮತ್ತು 22ರಂದು ರೆಂಜಲಾಡಿ ಆರ್.ಐ.ಸಿ ಕ್ಯಾಂಪಸ್‌ನಲ್ಲಿ ನಡೆಯಲಿದೆ.


ಸೆ.21ರಂದು ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆದಂ ಹಾಜಿ ಕಮ್ಮಾಡಿ ವಹಿಸಲಿದ್ದು ರೆಂಜಲಾಡಿ ಬದ್ರಿಯಾ ಜುಮಾ ಮಸೀದಿಯ ಖತೀಬ್ ನಾಸಿರ್ ಫೈಝಿ ದುವಾ ನೆರವೇರಿಸಲಿದ್ದಾರೆ. ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಪ್ರಾಸ್ತಾವಿಕ ಭಾಷಣ ನಡೆಸಲಿದ್ದಾರೆ. ಸರ್ವಧರ್ಮೀಯ ಸೌಹಾರ್ದ ಸಂಗಮದಲ್ಲಿ ಕುಂಬ್ರ ಕೆಐಸಿ ಸಂಸ್ಥೆಯ ಪ್ರೊ. ಅನೀಸ್ ಕೌಸರಿ ಹಾಗೂ ಪತ್ರಕರ್ತ ಸಿಶೇ ಕಜೆಮಾರ್ ಸೌಹಾರ್ದ ಸಂದೇಶ ಭಾಷಣ ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ಮೌಲೀದ್ ಮಜ್ಲಿಸ್, ದಫ್ ಪ್ರದರ್ಶನ, ಪ್ರವಾದಿ ಸಂದೇಶ, ಆರ್‌ಐಸಿ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸ್ಪರ್ಧೆ, ಬುರ್ದಾ ಮಜ್ಲಿಸ್ ಮತ್ತಿತರ ಕಾರ್ಯಕ್ರಮ ನಡೆಯಲಿದೆ.

ಸೆ.22ರಂದು ಸಯ್ಯದ್ ಸಫ್ವಾನ್ ತಂಙಳ್ ಏಝ್‌ಮಲ ದುವಾಶೀರ್ವಚನ ನೀಡಲಿದ್ದು, ಉಮ್ಮರ್ ಮುಸ್ಲಿಯಾರ್ ನಂಜೆ ಉದ್ಘಾಟಿಸಲಿದ್ದಾರೆ. ಆರ್‌ಐಸಿ ಯೂತ್ ವಿಂಗ್ ಅಧ್ಯಕ್ಷ ಪಿ.ಕೆ ಮುಹಮ್ಮದ್ ಕೂಡುರಸ್ತೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾಜರತ್ನ ಪ್ರಶಸ್ತಿ ಪುರಸ್ಕೃತ ಬಿ.ಕೆ ಝೈನುಲ್ ಆಬಿದ್ ಲಕ್ಷ್ಮೇಶ್ವರ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಬಳಿಕ ಖ್ಯಾತ ಕಥಾ ಪ್ರಸಂಗ ತಂಡವಾಗಿರುವ ಎಂಎಚ್‌ಆರ್ ಹಂಝ ಮುಸ್ಲಿಯಾರ್ ಮತ್ತು ಸಂಗಡಿಗರಿಂದ ಇಸ್ಲಾಮಿಕ್ ಕಥಾ ಪ್ರಸಂಗ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here