ವಿವೇಕಾನಂದ ಪಾಲಿಟಕ್ನಿಕ್‌ನಲ್ಲಿ ಪರಿಸರ ಸಂರಕ್ಷಣೆ ಕಾರ್ಯಗಾರ

0


ಪುತ್ತೂರು: ವಿವೇಕಾಂದ ಪಾಲಿಟೆಕ್ನಿಕ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ಧಿಯ ಪ್ರಯುಕ್ತ ಸಂಘದ ಪಂಚ ಸಂರಕ್ಷಣ ಯೋಜನೆಯಡಿಯಲಿ ಪರಿಸರ ಸಂರಕ್ಷಣೆ ಎಂಬ ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಸಂಸ್ಥೆಯ ಉಪಾನ್ಯಸಕರಾದ ಪ್ರದೀಪ್ ಡಿ.ಬಿ ಇವರು ಭಾರತಾಂಬೆಗೆ ಪುಷ್ಪರ್ಚಾನೆಗೈದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮೆಕ್ಯಾನಿಕಲ್ ವಿಭಾಗದ ಹಿರಿಯ ಉಪಾನ್ಯಸಕರಾದ ಪ್ರಶಾಂತ್ ವಹಿಸಿದರು. ಪ್ರದೀಪ್ ಡಿ.ಬಿ ಯವರು ಮಾತನಾಡಿ, ಹೆತ್ತ ತಾಯಿ ಅಮ್ಮ ಆದರೆ ಹೊತ್ತ ತಾಯಿ ಭೂಮಿ ತಾಯಿ ಇರುವರ ಋಣ ತೀರಿಸಲು ಮಕ್ಕಳಾದ ನಮ್ಮಿಂದ ಸಾದ್ಯವಿಲ್ಲ ಆದರೆ ನಾವು ಅವರಿಗೆ ಉಡುಗೊರೆ ನೀಡಬಹುದು. ತಾಯಿಗೆ ಸೀರೆ ಕೊಡುತ್ತೆವೇ ಹಾಗೇಯೆ ಭೂಮಿ ತಾಯಿಗೆ ಪರಿಸರ ಶುಚ್ಚಿತ ಹಾಗೂ ಗಿಡ ನೆಡುವ ಮೂಲಕ ಉಡುಗೊರೆ ನೀಡಬಹುದು ಎಂದು ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.


ಕಾಲೇಜಿನ ಆಡಳಿತ ಮಂಡಳಿಯವರು, ಪ್ರಾಂಶುಪಾಲರು ಮತ್ತು ಶಕ್ಷಕ- ಶಿಕ್ಷಕೇತರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಶಾಂತ್ ಕೆ ಉಪನ್ಯಾಸಕರು ಮೆಕ್ಯಾನಿಕಲ್ ವಿಭಾಗ ಇವರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಅನಿಲ್ ರೈ, ಬೋಧಕರು ಮೆಕ್ಯಾನಿಕಲ್ ವಿಭಾಗ ಇವರು ಕಾರ್ಯಕ್ರಮವನ್ನು ಆಯೋಜಿಸಿ, ಧನ್ಯವಾದಿಸಿದರು.

LEAVE A REPLY

Please enter your comment!
Please enter your name here