ಕಾಣಿಯೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು, ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆ ಮಾಮಂಜೂರು, ಮಂಗಳೂರು ಇಲ್ಲಿ ನಡೆದ 17 ರ ವಯೋಮಿತಿಯ ಬಾಲಕಿಯರ ಯೋಗಾಸನ ಪಂದ್ಯಾಟದ ಸಾಂಪ್ರದಾಯಿಕ ಯೋಗಾಸನದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಶ್ರೀಮಾ ಕೆ ಎಚ್ (9ನೇ) ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ವಿಭಾಗಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ರಿದಮಿಕ ಪೇರ್ ಯೋಗಾಸನದಲ್ಲಿ ಅಸ್ಮಿ ಕೆ ಪಿ (8ನೇ) ಮತ್ತು ಜಾನ್ವಿ ಎಂ (8ನೇ) ದ್ವಿತೀಯ, ಆರ್ಟಿಸ್ಟಿಕ್ ಪೇರ್ ನಲ್ಲಿ ಪ್ರಣಮ್ಯ ಕೆ (10ನೇ), ಅವನಿ ಎಚ್ ಆರ್ (8ನೇ) ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಹಾಗೆಯೇ ಬಾಲಕರ ವಿಭಾಗದಲ್ಲಿ ಸಾಂಪ್ರದಾಯಿಕ ಯೋಗಾಸನ ಮತ್ತು ಆರ್ಟಿಸ್ಟಿಕ್ ಸಿಂಗಲ್ ಯೋಗಾಸನದಲ್ಲಿ ಮೋನಿಶ್ ತಂಟೆಪ್ಪಾಡಿ (9ನೇ) ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ಪ್ರಾಥಮಿಕ ವಿಭಾಗದ 14ರ ವಯೋಮಾನದ ಬಾಲಕಿಯರ ಆರ್ಟಿಸ್ಟಿಕ್ ಪೇರ್ ಯೋಗಾಸನದಲ್ಲಿ ವನ್ಶಿ ಕೆ ಎಂ (7ನೇ), ಲಿಶಾ (7ನೇ) ತೃತೀಯ, ರಿದಮಿಕ್ ಪೇರ್ ಯೋಗಾಸನದಲ್ಲಿ ಸಾಕ್ಷಿ ಜೆ (7 ನೇ), ವೈದೃತಿ (6ನೇ) ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಇವರಿಗೆ ಸಂಸ್ಥೆಯ ಯೋಗ ಶಿಕ್ಷಕಿ ಶಶಿಕಲಾ ಕೆ ತರಬೇತು ನೀಡಿರುತ್ತಾರೆ. ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್ ಕೆ , ಶಿಕ್ಷಕಿ ಸುಷ್ಮಾ ಎಚ್ ರೈ, ಪೋಷಕ ಬಂಧುಗಳಾದ ಸುಜಿತ್ ರೈ ಎಣ್ಮೂರುಪಟ್ಟೆ , ಸುಜಿತಕುಶಾಲಪ್ಪ ಗೌಡ ಸಹಕರಿಸಿದರು.