ಮಹತ್ವದ ಈ ಸಮೀಕ್ಷೆಯಿಂದ ಯಾರೊಬ್ಬರೂ ಹೊರಗುಳಿಯದಂತೆ ಜಾಗೃತಿ ಮೂಡಿಸಬೇಕಾಗಿದೆ – ಉಮರ್ ಯು.ಹೆಚ್
ಪುತ್ತೂರು: ಸೆ.22ರಿಂದ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುವ ಪ್ರತೀ ಕುಟುಂಬಗಳ ಜಾತಿ ಗಣತಿ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಬಗ್ಗೆ ಸಮಾಜದಲ್ಲಿ ಜಾಗೃತಿ, ಅರಿವು ಮೂಡಿಸುವ, ಮತ್ತು 60 ಪ್ರಶ್ನೆಗಳ ಬಗ್ಗೆ ಸಮಾಲೋಚನಾ ಸಭೆ ಮತ್ತು ಮಾಹಿತಿ ನೀಡುವ ಕಾರ್ಯಕ್ರಮ ಸುಳ್ಯ ಅನ್ಸಾರಿಯಾ ಗಲ್ಫ್ ಆಡಿಟೋರಿಯಂನಲ್ಲಿ ಜರಗಿತು.

ಕರ್ನಾಟಕ ಬ್ಯಾರಿ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಹೆಚ್. ಭಾಗವಹಿಸಿ ಮಾತನಾಡಿ, ಮುಸ್ಲಿಮರು ಯಾವುದೇ ಗೊಂದಲಕ್ಕೆ ಒಳಗಾಗದೆ ಮಾಹಿತಿಯನ್ನು ನೀಡಿ ಈ ಸಮಗ್ರ ಸಮೀಕ್ಷೆಯಲ್ಲಿ ಭಾಗವಹಿಸಬೇಕು. ಇದು ಇತಿಹಾಸದಲ್ಲಿಯೇ ಅತ್ಯಮೂಲ್ಯ ಮತ್ತು ಐತಿಹಾಸಿಕ ಸಮೀಕ್ಷೆ, ಧರ್ಮ ಇಸ್ಲಾಂ, ಜಾತಿ ಮುಸ್ಲಿಂ ಎಂಬುದಾಗಿ ಎಲ್ಲರು ಕಡ್ಡಾಯವಾಗಿ ನಮೂದಿಸಬೇಕು. ಉಳಿದಂತೆ ಉಪ ಜಾತಿ ಕಾಲಂನಲ್ಲಿ ಬ್ಯಾರಿ ಮುಸ್ಲಿಂ ಎಂಬುದಾಗಿ ನಮೂದಿಸಿದರೆ ಬ್ಯಾರಿ ಜನಾಂಗದ ಸಂಖ್ಯೆ ಆಧರಿಸಿ, ಸವಲತ್ತುಗಳು ಸಿಗಲು ಅನುಕೂಲ, ಮಾತೃಭಾಷೆ ಬ್ಯಾರಿ ಎಂದು ನಮೂದಿಸಿ ಒಂದು ವೇಳೆ ಮಾತೃ ಭಾಷೆ ಮಲಯಾಳಂ, ಅಥವಾ ಯಾವುದು ಇಲ್ಲ ಎಂದು ನಮೂದಿಸಲು ಇಚ್ಚಿಸಿದಲ್ಲಿ ತಪ್ಪಲ್ಲ ಎಂದರು.
ಪ್ರಾರಂಭದಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಮಾತನಾಡಿ, ದಸರಾ ರಜೆ ಇರುವುದರಿಂದ ಸಮೀಕ್ಷೆ ಮುಗಿಸಿಯೇ ಎಲ್ಲಿಗೆ ಹೋಗುವುದು ಇದ್ದರೂ ಹೋಗಬಹುದು ನಿರ್ಲಕ್ಷ್ಯ ವಹಿಸಬೇಡಿ, ಗ್ಯಾರಂಟಿ ಯೋಜನೆ ಗಳ ಪ್ರಯೋಜನ ಪಡೆಯುವ ಯಾರಿಗೂ ಇದರಿಂದ ತೊಂದರೆಯಾಗುವುದಿಲ್ಲ ಎಂದರು.
ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್, ಸಮಾಜದ ಪ್ರಮುಖರುಗಳಾದ ಹಾಜಿ ಕಎoಎಸ್ ಮಹಮ್ಮದ್ ಬಾರ್ಪಣೆ, ಕೆ.ಎಸ್. ಉಮ್ಮರ್, ಶಾಹುಲ್ ಹಮೀದ್ ಕುತ್ತಾ ಮೊಟ್ಟೆ,,ಶರೀಫ್ ಬಾಳಿಲ, ಇಬ್ರಾಹಿಂ ಹಾಜಿ ಕತ್ತರ್, ಪಿ.ಎ. ಮಹಮ್ಮದ್, ಇಕ್ಬಾಲ್ ಎಲಿಮಲೆ, ಜಿ.ಕೆ ಹಮೀದ್, ಮಜೀದ್ ಜನತಾ, ಅಬೂಬಕ್ಕರ್ ಅಡ್ವೋಕೇಟ್, ಅಬ್ದುಲ್ ಖಾದರ್ ಕಲ್ಲುಗುಂಡಿ, ಅಬ್ಬಾಸ್ ಗುತ್ತಿಗಾರು, ಇಲ್ಯಾ ಸ್ ಕಾಶಿಪಟ್ಟಣ, ಶಾಫಿ ಕುತ್ತಾಮೊಟ್ಟೆ, ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ಸ್, ಇಕ್ಬಾಲ್ ಎಲಿಮಲೆ, ಅಶ್ರಫ್ ಗುಂಡಿ ಆರಂತೋಡು, ತಾಜ್ ಮಹಮ್ಮದ್ ಕಲ್ಲುಗುಂಡಿ,ಎ.ಕೆ ಹಾಜಿ ಕುಂಭಕ್ಕೋಡ್, ಎ.ಕೆ ಹನೀಫ್ ಸಂಪಾಜೆ, ರಶೀದ್ ಜಟ್ಟಿಪ್ಪಳ್ಳ, ಇಬ್ರಾಹಿಂ ಜಯನಗರ, ಫೈಝಲ್ ಕಟ್ಟೆಕ್ಕಾರ್ಸ್, ಅಬೂಬಕ್ಕರ್ ಸಿದ್ದೀಕ್ ಎಣ್ಮೂರ್ ಕೆ.ಎಚ್. ಮಹಮ್ಮದ್ ಪಂಜ, ಮಹಮ್ಮದ್ ಇರ್ಷಾದ್ ಕಲ್ಲುಗುಂಡಿ, ಅಮೀರ್ ಕುಕ್ಕುಂಬಳ ಆರಂತೋಡು ಮೊದಲಾದವರು ಭಾಗವಹಿಸಿದ್ದರು.