ನೆಲ್ಯಾಡಿ: ಕೊಕ್ಕಡ ಗ್ರಾಮದ ಬೋಳದಬೈಲು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ, ಕೊಕ್ಕಡ ಗ್ರಾಮದ ಮರುವಂತಿಲ ನಿವಾಸಿ ಸಂಗೀತಾ (40ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಸೆ.20ರಂದು ನಿಧನರಾದರು.
ಸಂಗೀತಾ ಅವರು ಕಳೆದ 5 ವರ್ಷಗಳಿಂದ ಬೋಳದಬೈಲು ಅಂಗನವಾಡಿಯಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಸಂಗೀತಾ ಅವರ ಪತಿ ಉಮೇಶ್ ಅವರು 8 ವರ್ಷಗಳ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದರು. ಮೃತರು ಪುತ್ರಿ ಪೂಜಾ ಅವರನ್ನು ಅಗಲಿದ್ದಾರೆ.