ಪುತ್ತೂರು: ಕುಳ ಗ್ರಾಮದ ಕಲ್ಲಂದಡ್ಕದಲ್ಲಿನ ಮುಚ್ಚಿದ ಕೋರೆಯಲ್ಲಿದ್ದ ನೀರಿಗೆ ಬಿದ್ದು ಕಬಕ ನಿವಾಸಿ ವಿದ್ಯಾರ್ಥಿಯೊಬ್ಬರು ಮೃತಪಟ್ಟ ಘಟನೆ ಸೆ.21ರಂದು ಸಂಜೆ ನಡೆದಿದೆ.
ಕಬಕ ನಿವಾಸಿ ಹಸೈನ್ ಎಂಬವರ ಪುತ್ರ ಅಜ್ಮಾನ್ ಮೃತಪಟ್ಟ ವಿದ್ಯಾರ್ಥಿ ಎಂದು ಹೇಳಲಾಗಿದೆ. ಸ್ನೇಹಿತರುಗಳು ಕುಳ ಗ್ರಾಮದ ಕಲ್ಲಂದಡ್ಕ ಮುಚ್ಚಿದ ಕೋರೆಯ ಬಳಿ ತೆರಳಿದ್ದರೆನ್ನಲಾಗಿದೆ.
ಅಲ್ಲಿ ಈ ಘಟನೆ ನಡೆದಿದೆ. ಘಟನೆ ಕುರಿತು ವಿಟ್ಲ ಪೊಲೀಸ್ ಠಾಣೆಗೆ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.