ಅಧ್ಯಕ್ಷ ಸೀತಾರಾಮ ರೈ, ಪ್ರ.ಕಾರ್ಯದರ್ಶಿ ಮೋಹನ್, ಕಾರ್ಯಾಧ್ಯಕ್ಷ ಅಜಿತ್ ರೈ
ಪುತ್ತೂರು: ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಎಂಬಲ್ಲಿ ನಿರ್ಮಾಣಗೊಂಡಿರುವ ಶ್ರೀ ಶಕ್ತಿ ಜಠಾಧಾರಿ ಭಜನಾ ಮಂದಿರದ ಲೋಕಾರ್ಪಣಾ ಸಮಿತಿಯ ಅಧ್ಯಕ್ಷರಾಗಿ ಮಂಗಳೂರು ಎಂಆರ್ಪಿಎಲ್ ಸೀತಾರಾಮ ರೈ ಕೈಕಾರ, ಪ್ರಧಾನ ಕಾರ್ಯದರ್ಶಿಯಾಗಿ ಮೋಹನ್ ಕೊಳಕ್ಕೆಗದ್ದೆ, ಕಾರ್ಯಾಧ್ಯಕ್ಷರಾಗಿ ಅಜಿತ್ ರೈ ಹೊಸಮನೆ ಆಯ್ಕೆಯಾಗಿದ್ದಾರೆ.
ಸಮಿತಿಯ ಗೌರವಾಧ್ಯಕ್ಷರಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಶೋಕ್ ಕುಮಾರ್ ರೈ, ನಿವೃತ್ತ ಮುಖ್ಯಗುರು ಶ್ರೀಧರ ರೈ ಎಚ್. ಹೊಸಮನೆ, ಉಪಾಧ್ಯಕ್ಷರಾಗಿ ಶಶಿಕಿರಣ್ ರೈ ನೂಜಿಬೈಲು, ಲಕ್ಷ್ಮಣ ನಾಯ್ಕ ದರ್ಖಾಸು, ರಮೇಶ್ ರೈ ಮೊಡಪ್ಪಾಡಿ, ಕಾರ್ಯದರ್ಶಿಗಳಾಗಿ ಮಂಜುನಾಥ ರೈ ಮೊಡಪ್ಪಾಡಿ, ಚಂದ್ರಿಕಾ ಲೋಕೇಶ್ ರೈ ಮೊಡಪ್ಪಾಡಿ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಕೋಶಾಧಿಕಾರಿಯಾಗಿ ಸಂದೀಪ್ ರೈ ಚಿಲ್ಮೆತ್ತಾರು, ಗೌರವ ಸಲಹೆಗಾರರಾಗಿ ಡಾ.ರವಿಶಂಕರ್ ಪೆರ್ವಾಜೆ, ಜತ್ತಪ್ಪ ರೈ ಮೊಡಪ್ಪಾಡಿಗುತ್ತು, ಜಗಜ್ಜೀವನ್ದಾಸ್ ರೈ ಚಿಲ್ಮೆತ್ತಾರು, ಅಕ್ಕರಿ ರೈ ಕುದ್ರಡ್ಕ, ದಾಮೋದರ ನಾಯಕ್ ಕಾಪಿಕಾಡು, ಬಾಲಕೃಷ್ಣ ರೈ ಚಿಲ್ಮೆತ್ತಾರು, ಲಲಿತಾ ಎಂ ಭಂಡಾರಿ ಚಿಲ್ಮೆತ್ತಾರು, ಇಂದಿರಾ ನಾರಾಯಣ ರೈ ಚಿಲ್ಮೆತ್ತಾರು ಹಾಗೂ ರಾಕೇಶ್ ಶೆಟ್ಟಿ ಕುದ್ರಡ್ಕ ಆಯ್ಕೆಯಾಗಿದ್ದಾರೆ.
1999ರಲ್ಲಿ ಮೊಡಪ್ಪಾಡಿ ಜಠಾಧಾರಿ ದೈವದ ಸಾನಿಧ್ಯದಲ್ಲಿ ಸ್ಥಾಪನೆಗೊಂಡಿದ್ದ ಭಜಕ ವೃಂದ ಮುಂದೆ ಕಾಲಾಂತರದಲ್ಲಿ ಭಜನಾ ಮಂದಿರವಾಗಿ ನಿರ್ಮಾಣಗೊಂಡಿತ್ತು. ಇದೀಗ ಸುಮಾರು ರೂ.25ಲಕ್ಷ ವೆಚ್ಚದಲ್ಲಿ ನೂತನ ಭಜನಾ ಮಂದಿರ ನಿರ್ಮಾಣಗೊಂಡಿದ್ದು ಲೋಕಾರ್ಪಣಾ ಕಾರ್ಯಕ್ರಮಗಳು ಡಿ.7ರಿಂದ 9ರ ತನಕ ನಡೆಯಲಿದೆ.
ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳಿಗೆ ಡಿ.7ರಂದು ಚಾಲನೆ ದೊರೆಯಲಿದ್ದು, ಬೆಳಿಗ್ಗೆ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಛಾಯಾ ಬಿಂಬ ಹಾಗೂ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಸಂಜೆ ವಿವಿಧ ವೈದಿಕ, ತಾಂತ್ರಿಕ ವಿಧಿ ವಿಧಾನ ಗಳು ಪ್ರಾರಂಭಗೊಳ್ಳಲಿದೆ. ಡಿ.8ರಂದು ಛಾಯಾ ಬಿಂಬ ಪ್ರತಿಷ್ಠೆ, ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ, ಸಂಜೆ ಸಾಮೂಹಿಕ ದುರ್ಗಾನಮಸ್ಕಾರ ಪೂಜೆ, ಏಕಾಹ ಭಜನೆ ಪ್ರಾರಂಭ, ಡಿ.9ರಂದು ಸಂಜೆ ಏಕಾಹ ಭಜನೆ ಮಂಗಳೋತ್ಸವ ನಡೆದು ಸಂಜೆ ಕಟೀಲು ಶ್ರೀದುರ್ಗಾಪರಮೇಶ್ವರಿ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಭಜನಾ ಮಂದಿರದ ಪ್ರಕಟಣೆ ತಿಳಿಸಿದೆ.