ರಾಮಕುಂಜ: ಕಸ್ವಿ ಹಸಿರು ದಿಬ್ಬಣ ನಿರ್ಮಾಣದ ಪ್ರಕೃತಿಯ ಉಳಿವಿನ ಕಾಳಜಿ ಹೊತ್ತ ಕನ್ನಡ ಕಿರುಚಿತ್ರ ಹರಿದ್ವರ್ಣ ಇದರ 10ನೇ ಪ್ರದರ್ಶನ ರಾಮಕುಂಜ ಕನ್ನಡ ಮಾದ್ಯಮ ಪ್ರೌಢ ಶಾಲೆಯಲ್ಲಿ ನಡೆಯಿತು.

ಚಿತ್ರ ವೀಕ್ಷಿಸಿದ ಬಳಿಕ ಶಿಕ್ಷಕಿ ಅನುಷಾ ಅವರು ಮಾತನಾಡಿ, ಮಕ್ಕಳಲ್ಲಿ ಪ್ರಕೃತಿಯ ಬಗೆಗಿನ ಕಾಳಜಿ ಈ ಚಿತ್ರದ ಮುಖಾಂತರ ಮೂಡಿದೆ ಎಂದರು. ಶಾಲಾ ಮಕ್ಕಳು ಹಾಗೂ ಶಿಕ್ಷಕರು ಕಿರುಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಹಳೆವಿದ್ಯಾರ್ಥಿ ಗಣೇಶ್ ಕಟ್ಟಪುಣಿ, ಕಿರುಚಿತ್ರದ ನಿರ್ಮಾಪಕಿ ಶ್ರದ್ಧಾ ಕೇಶವ ರಾಮಕುಂಜ ಉಪಸ್ಥಿತರಿದ್ದರು. ಕಿರುಚಿತ್ರ ನಿರ್ಮಾಪಕಿ ಶ್ರದ್ಧಾ ಕೇಶವ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.