ರಾತ್ರೋರಾತ್ರಿ ಅಗ್ನಿಶಾಮಕದಳದ ಕಾರ್ಯಾಚರಣೆ : ಬಾವಿಗೆ ಬಿದ್ದ ವೃದ್ದೆಯ ರಕ್ಷಣೆ

0

ಪುತ್ತೂರು: ಮನೆಯ ಸಮೀಪದ ಬಾವಿಗೆ ಬಿದ್ದ ವೃದ್ದೆಯೊಬ್ಬರನ್ನು ಅಗ್ನಿಶಾಮಕದಳದವರು ರಕ್ಷಣೆ ಮಾಡಿದ ಘಟನೆ ಸೆ.21ರ ರಾತ್ರಿ ಪುತ್ತೂರು ಪರ್ಲಡ್ಕ ರಸ್ತೆಯ ಕಲ್ಲಿಮಾರ್ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.


ಕಲ್ಲಿಮಾರ್ ದಿ. ವೆಂಕಪ್ಪ ನಾಯ್ಕ್ ಎಂಬವರ ಪತ್ನಿ ಉಮಾ ನಾಯ್ಕ್ (82ವ)ರವರು ಬಾವಿಗೆ ಬಿದ್ದವರು. ಅವರು ರಾತ್ರಿ ವೇಳೆ ಮನೆಯ ಸಮೀಪದ ಬಾವಿಗೆ ಬಿದ್ದಿದ್ದರು. ತಕ್ಷಣ ಮನೆ ಮಂದಿ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದಂತೆ ಠಾಣಾಧಿಕಾರಿ ಶಂಕರ್ ಅವರ ನೇತೃತ್ವವದಲ್ಲಿ ಸಿಬ್ಬಂದಿಗಳಾದ ಲೀಲಾಧರ್, ಹರಿಪ್ರಕಾಶ್, ಚೊಣ್ಣಪ್ಪ, ವಿನೋದ್, ಸಿದ್ದಾರೂಡ ಅವರು ಸುಮಾರು 20 ನಿಮಿಷದ ಕಾರ್ಯಾಚರಣೆಯಲ್ಲಿ ವೃದ್ದೆಯನ್ನು ಬಾವಿಯಿಂದ ಮೇಲಕ್ಕೆ ಎತ್ತುವಲ್ಲಿ ಯಶಸ್ವಿಯಾಗಿದ್ದಾರೆ. ವೃದ್ಧೆ ಉಮಾ ಅವರು ಚೇತರಿಕೆಗೊಂಡಿದ್ದಾರೆ. ಬಾವಿಯಲ್ಲಿ ನೀರಿನ ಮಟ್ಟ ಕಡಿಮೆ ಇದ್ದರಿಂದ ಯಾವುದೆ ಅಪಾಯ ಸಂಭವಿಸರಲಿಲ್ಲ.

LEAVE A REPLY

Please enter your comment!
Please enter your name here