ಪುತ್ತೂರು: ಪುತ್ತೂರಿನ ಅಕ್ಷಯ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ ‘ಭಾರತದಲ್ಲಿ ತೆರಿಗೆ ವ್ಯವಸ್ಥೆ’ ಎನ್ನುವ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಅಕ್ಷಯ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ರಾಕೇಶ್. ಕೆ ಭಾಗವಹಿಸಿದ್ದರು. ಅವರು ವಿವಿಧ ರೀತಿಯ ತೆರಿಗೆಗಳ ಬಗ್ಗೆ ವಿವರಿಸುತ್ತಾ, ಸಮಾಜದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ತೆರಿಗೆದಾರನಾಗಿರುತ್ತಾನೆ. ತೆರಿಗೆಯ ದರ ಮತ್ತು ತೆರಿಗೆಯ ವಿವಿಧ ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳು ಅರಿವನ್ನು ಹೊಂದಿರಬೇಕು ಎಂದರು. ತೆರಿಗೆಯ ಬಗ್ಗೆ ಓದು ಬರಹದ ಮೂಲಕ ಪಡೆಯುವ ಕಲಿಕೆಯ ಜೊತೆಗೆ ಪ್ರಾಯೋಗಿಕ ಅನುಭವಗಳನ್ನು ವಿದ್ಯಾರ್ಥಿಗಳು ಪಡೆಯುವುದು ಮುಖ್ಯವಾಗಿದೆ ಎಂದು ಉದಾಹರಣೆಗಳ ಮೂಲಕ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲೆ ಗಂಗಾರತ್ನ ಮಾತನಾಡಿ ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಜೊತೆಗೆ ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಲು ಆಸಕ್ತಿವಹಿಸಬೇಕು ಎಂದರು.
ವಾಣಿಜ್ಯ ಸಂಘದ ಸಂಯೋಜಕಿ ಪರಿಮಳಾ ರಾವ್ ಪರಿಚಯಿಸಿದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕಾರ್ತಿಕ್.ಬಿ ಸ್ವಾಗತಿಸಿ ಮಹಮ್ಮದ್ ಹಾಶಿಮ್ ವಂದಿಸಿದರು. ಭುವನ್ ಎನ್. ಆರ್ ನಿರೂಪಿಸಿದರು.