ನಿವೃತ್ತ ಸೈನಿಕನಿಗೆ ಪ್ರಾರ್ಥಮಿಕ ಹಂತದ ತರಬೇತಿ ನೀಡಿದ್ದ ಅಕಾಡೆಮಿ
ಪುತ್ತೂರು : ವಿದ್ಯಾಮಾತಾ ಅಕಾಡೆಮಿಯಲ್ಲಿ PC/PSI ಬ್ಯಾಚ್ ನಲ್ಲಿ ತರಬೇತಿ ಪಡೆದಿದ್ದ ನಿವೃತ್ತ ಯೋಧ ಹರಿಪ್ರಸಾದ ಪಿ ರವರು 2024ರ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಇಲಾಖಾ ತರಬೇತಿ ಮುಗಿಸಿ ಪೊಲೀಸ್ ಇಲಾಖೆಯಲ್ಲಿ ಜಿಲ್ಲಾ ಮೀಸಲು ಪಡೆಯ ಕಾನ್ಸ್ಟೇಬಲ್ ಆಗಿ ನಿಯೋಜನೆಗೊಂಡಿದ್ದಾರೆ.

ನಿರಂತರ ಪರಿಶ್ರಮದಿಂದ ಆಯ್ಕೆಗೊಂಡ ಹರಿಪ್ರಸಾದ ಪಿ
ಹರಿಪ್ರಸಾದರವರು 18 ವರ್ಷಗಳ ಕಾಲ ಭಾರತೀಯ ಭೂ ಸೇನೆಯಲ್ಲಿ ವಿವಿದೆಡೆ ಸೇವೆ ಸಲ್ಲಿಸಿ ನಿವೃತ್ತರಾದ ನಂತರ , ಪೊಲೀಸ್ ಸೇವೆಯ ಇಚ್ಛೆಯಿಂದ ವಿದ್ಯಾಮಾತಾದಲ್ಲಿ ಪೊಲೀಸ್ ನೇಮಕಾತಿ ತರಬೇತಿ ಪಡೆದು, ತನ್ನ ಪ್ರಯತ್ನ ಮುಂದುವರೆಸಿದ್ದರು.
KSP-DR Constable ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಎಲ್ಲಾ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ತಾಲೂಕಿನ ಮಾಲೆತ್ತೊಡಿ ನಿವಾಸಿ ಶೀನಪ್ಪ ಗೌಡ ಮತ್ತು ದೇವಕಿ ದಂಪತಿಗಳ ಪುತ್ರರಾದ ಇವರು ಪತ್ನಿ ಶ್ಯಾಮಲ ಕೆಮ್ಮಾಯಿ ಮಕ್ಕಳಾದ ಮಿತಾಂಸ್ ಹಾಗೂ ರಿಯಾಂಶಿ ಜೊತೆ ವಾಸವಾಗಿದ್ದಾರೆ. ಇವರಿಗೆ ವಿವಿಧ ಸರಕಾರಿ ನೇಮಕಾತಿಗಳಿಗೆ ಅರ್ಜಿ ಸಲ್ಲಿಸುವಿಕೆ ಹಾಗೂ ತರಬೇತಿ ನೀಡಿರುವ ವಿದ್ಯಾಮಾತಾ ಅಕಾಡೆಮಿಯ ಕೀರ್ತಿಯನ್ನು ಉನ್ನತಕ್ಕೆ ಏರಿಸಿದ್ದು ಹೆಮ್ಮೆಯ ಸಂಗತಿ. ಇವರ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ ತರಬೇತುದಾರರು, ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಇಲಾಖೆಯಲ್ಲೂ ನಿವೃತ್ತ ಸೈನಿಕ ಕೋಟಾದ ಅಡಿಯಲ್ಲಿ ನೇಮಕಗೊಳ್ಳಲು ಅವಕಾಶವಿದ್ದು, ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿದ್ದು ಈ ನಿಟ್ಟಿನಲ್ಲಿ ವಿದ್ಯಾಮಾತಾ ಅಕಾಡೆಮಿಯು ನಿವೃತ್ತ ಯೋಧರಿಗೂ ವಿಶೇಷ ತರಬೇತಿ ನೀಡುತ್ತಿದೆ.
2025ನೇ ಸಾಲಿನ ಪೊಲೀಸ್ ನೇಮಕಾತಿ ಸೇರಿದಂತೆ ವಿವಿಧ ಸಶಸ್ತ್ರ ಪಡೆಗಳ ನೇಮಕಾತಿಗೂ ಇದೀಗ ತರಬೇತಿಯನ್ನು ವಿದ್ಯಾಮಾತಾ ಆರಂಭಿಸಿದ್ದು , ಆಸಕ್ತರು ಅಕಾಡೆಮಿಯನ್ನು ಸಂಪರ್ಕಿಸಬಹುದು.