ರೂ.3,27ಲಕ್ಷ ಲಾಭ, ಶೇ.25 ಡಿವಿಡೆಂಟ್, 50 ಪೈಸ್ ಬೋನಸ್
ಪುತ್ತೂರು:ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘವು 2024-25ನೇ ಸಾಲಿನಲ್ಲಿ 3.27ಲಕ್ಷ ಲಾಭಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.25 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 50ಪೈಸೆ ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಿದರು.

ಸಭೆಯು ಸೆ.22ರಂದು ಸಂಘದ ಸಭಾಂಗಣದಲ್ಲಿ ನಡೆಯಿತು. ವರದಿ ಸಾಲಿನಲ್ಲಿ ಸಂಘದಲ್ಲಿ 176 ಮಂದಿ ಸದಸ್ಯರಿದ್ದು, ರೂ.40,500 ಪಾಲು ಬಂಡವಾಳವಿದೆ. 93 ಮಂದಿ ಹಾಲು ಉತ್ಪಾದಕರಿಂದ ಸಂಘವು ವರದಿ ವರ್ಷದಲ್ಲಿ 3,16,537.38 ಲೀಟರ್ ಹಾಲು ಖರೀದಿಸಿದೆ. 9,792.5 ಲೀಟರ್ ಹಾಲು ಸ್ಥಳೀಯವಾಗಿ ಮಾರಾಟ ಮಾಡಿದೆ. ಸ್ಥಳೀಯ ಹಾಲು ಮಾರಾಟದಿಂದ ರೂ.4,81,952, ಮಾದರಿ ಹಾಲು ಮಾರಾಟದಿಂದ ರೂ.63,532.06 ಆದಾಯ ಬಂದಿದೆ. 45,45,095 ಮೊತ್ತದ ಪಶು ಆಹಾರ, ರೂ.1,07,580 ಮೊತ್ತ ಲವಣ ಮಿಶ್ರಣ, ರೂ.23,000 ಸಮೃದ್ಧಿ, ರೂ.2,59,185 ಶೈಲೇಜ್ ಮಾರಾಟವಾಗಿದೆ. ಒಟ್ಟು ವ್ಯಾಪಾರದಿಂದ ರೂ.12,25,397.53 ಲಾಭ ಬಂದಿದೆ. ಇತರ ಮೂಲಗಳಿಂದರ ರೂ.4,14,399.90 ಆದಾಯ ಸೇರಿದಂತೆ ವರದಿ ವರ್ಷದಲ್ಲಿ ಸಂಘಕ್ಕೆ ಒಟ್ಟು ರೂ.16,39,797.43 ಲಾಭಬಂದಿದೆ. ಇದರಲ್ಲಿ ಸಿಬ್ಬಂದಿ ವೇತನ ರೂ.5,05,769, ಇತರ ಸಾದಿಲ್ವಾರು ಖರ್ಚು ರೂ.3,86,333.91 ಹಾಗೂ ಕಾದಿಸಿದದ ವೆಚ್ಚ ರೂ.4,20,266 ಕಳೆದು ರೂ.3,27,428.52 ನಿವ್ವಳ ಲಾಭ ಗಳಿಸಿದೆ ಎಂದರು.

ದ.ಕ ಹಾಲು ಒಕ್ಕೂಟದ ನಿರ್ದೇಶಕ ಚಂದ್ರಶೇಖರ ರಾವ್ ಮಾತನಾಡಿ, ಹೈನುಗಾರರ ಶ್ರಮ, ಪೂರೈಸುವ ಗುಣಮಟ್ಟದ ಹಾಲುನಿಂದಾಗಿ ಸಂಘದ ಜೊತೆಗೆ ದ.ಕ ಹಾಲು ಒಕ್ಕೂಟವು ಉತ್ತಮ ಲಾಭ ಪಡೆದಿದೆ. ಜಿಲ್ಲೆಯಲ್ಲಿ ಹಾಲಿನ ಉತ್ಪಾದನಾ ವೆಚ್ಚವೇ ಅಧಿಕವಿದ್ದು ದರ ಹೆಚ್ಚಳಕ್ಕೆ ಒಕ್ಕೂಟದ ಅಧ್ಯಕ್ಷೆ ನೇತೃತ್ವದಲ್ಲಿ ಕೆಎಂಎಫ್ಗೆ ಮನವಿ ಮಾಡಲಾಗಿದೆ. ಅನುಮತಿ ನೀಡಿದರೆ ಅದನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗುವುದು. ರೈತರು ಗುಣಮಟ್ಟದ ಹಾಲನ್ನೇ ಸಂಘಕ್ಕೆ ನೀಡಿ ಸಹಕರಿಸುವಂತೆ ತಿಳಿಸಿದರು.

ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀದೇವಿ ಮಾತನಾಡಿ, ವ್ಯವಹಾರ ಹಾಗೂ ಹೈನುಗಾರಿಕೆಯಲ್ಲಿ ಮುಂಡೂರು ಸಂಘವು ಅಭಿವೃದ್ಧಿಯತ್ತ ಸಾಗುತ್ತಿದೆ. 5೦೦ ಲೀಟರ್ ಇದ್ದ ಹಾಲು ಸಂಗ್ರಹಣೆ 900ಲೀಟರ್ಗೆ ಏರಿಕೆಯಾಗಿದೆ ಎಂದರು. ಹೈನುಗಾರಿಕೆಗೆ ಒಕ್ಕೂಟದಿಂದ ಸಾಕಷ್ಟು ಅನುದಾನಗಳ ದೊರೆಯುತ್ತಿದ್ದು ಅವುಗಳನ್ನು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಗುಣಮಟ್ಟದ ಆಧಾರದಲ್ಲಿ ಹೈನುಗಾರರಿಗೆ ಪ್ರಶಸ್ತಿ ನೀಡಬೇಕು. ಹೈನುಗಾರಿಕೆ ಅಭಿವೃದ್ಧಿ ಪಡಿಸಲು ಪೂರಕವಾಗುವಂತೆ ರೈತರಿಗೆ ಅಧ್ಯಯನ ಪ್ರವಾಸ, ರೈತರಿಗೆ ತರಬೇತಿ ನೀಡಬೇಕು ಸದಸ್ಯ ಸ್ವಸ್ತಿಕ್ ಆಗ್ರಹಿಸಿದರು. ಸಂಘದ ನಿವೇಶನವನ್ನು ಫ್ಲಾಟಿಂಗ್ ನಡೆಸಿ ದಾಖಲೆಗಳನ್ನು ಸಮಪರ್ಕಗೊಳಿಸಿದ ಬಳಿಕ ಅದರಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವಂತೆ ಸದಸ್ಯರು ಸಲಹೆ ನೀಡಿದ್ದು ಅದರಂತೆ ನಿರ್ಣಯ ಕೈಗೊಳ್ಳಲಾಗಿದೆ.
ಸನ್ಮಾನ, ಬಹುಮಾನ ವಿತರಣೆ:
ದ.ಕ ಹಾಲು ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾದ ಚಂದ್ರಶೇಖರ ರಾವ್ ಕಾವು ಇವರನ್ನು ಮಹಾಸಭೆಯಲ್ಲಿ ಸನ್ಮಾನಿಸಲಾಯಿತು. ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಹೈನುಗಾರರಾದ ಜಯಗುರು ಆಚಾರ್ ಹಿಂದಾರು(ಪ್ರ), ಕೃಷ್ಣರಾಜ ವೈಲಾಯ ಇಡಬೆಟ್ಟು(ದ್ವಿ) ಹೆಗ್ಗಪ್ಪ ರೈ ಪೊನೋನಿ(ತೃ) ಬಹುಮಾನ ನೀಡಲಾಯಿತು. ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ನೀಡುವ ಪ್ರತಿಭಾ ಪುರಸ್ಕಾರವನ್ನು ಧನ್ವಿ ಎ.ಆರ್ ಅಂಬಟ ಹಾಗೂ ಸಾತ್ವೀ ಶೆಟ್ಟಿಯವರ ಅನುಪಸ್ಥಿತಿಯಲ್ಲಿ ಅವರ ಪೋಷಕರಿಗೆ ನೀಡಿಗೌರವಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ಸುರೇಶ್ ಕಣ್ಣಾರಾಯ ಬನೇರಿ ಹಾಗೂ ಮುಂಡೂರು ಗ್ರಾ.ಪಂ ಸದಸ್ಯ ಉಮೇಶ್ ಅಂಬಟ ಪುರಸ್ಕಾರ ನೀಡಿ ಗೌರವಿಸಿದರು. ಸಭಾ ಕಾರ್ಯಕ್ರಮದ ಬಳಿಕ ಆಗಮಿಸಿ ದ. ಕ ಹಾಲು ಒಕ್ಕೂಟದ ನಿರ್ದೇಶಕ ಎಸ್.ಬಿ ಜಯರಾಮ ರೈಯವರನ್ನು ಕಚೇರಿಯಲ್ಲಿ ಸನ್ಮಾನಿಸಲಾಯಿತು.
ನಿರ್ದೇಶಕರಾದ ಜಗದೀಶ್ ಎನ್., ರಮೇಶ್ ಜಿ., ರೇವತಿ, ಚೇತನ, ಶಾರದಾ, ಅಂಗಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚೇತನಾ ಪ್ರಾರ್ಥಿಸಿದರು. ನಿರ್ದೇಶಕ ರಾಜೇಶ್ ಅಂಬಟ ಸ್ವಾಗತಿಸಿದರು. ಕಾರ್ಯದರ್ಶಿ ವೇದಶ್ರೀ ವರದಿ, ಆಯ-ವ್ಯಯಗಳನ್ನು ಮಂಡಿಸಿದರು. ಉಪಾಧ್ಯಕ್ಷ ಜಯಾನಂದ ಆಳ್ವ ಪಟ್ಟೆ ವಂದಿಸಿದರು. ಜಯಪ್ರಕಾಶ್ ಬಾಳಯ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಸುರೇಶ್ ಎ. ಹಾಗೂ ಜ್ಯೋತಿ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಭೋಜನ ನೆರವೇರಿತು.
ಮುಂಡೂರು ಹಾಲು ಉತ್ಪಾದಕರ ಸಂಘವು 39 ವರ್ಷದಲ್ಲಿ ಮುನ್ನಡೆಯುತ್ತಿದೆ. ಹೈನುಗಾರರಿಂದ ಸಂಘಕ್ಕೆ ಬರುವ ಹಾಲಿನ ಪ್ರಮಾಣದ ವೃದ್ಧಿಯಾಗಿದೆ. ಮುಂದಿನ ದಿನಗಳಲ್ಲಿ ಪ್ರತಿದಿನ ಸುಮಾರು 1200 ಲೀಟರ್ ಹಾಲು ಸಂಗ್ರಹಿಸುವ ಗುರಿ ಹೊಂದಿದೆ. ಸಂಘದ ವ್ಯವಹಾರವು ವೃದ್ಧಿಯಾಗಿ ಅತೀ ಹೆಚ್ಚು ಲಾಭಗಳಿಸಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ಗೆ 1 ರೂಪಾಯಿ ಬೋನಸ್ ನೀಡಲಾಗುವುದು. ಒಕ್ಕೂಟದಿಂದ ಹೈನುಗಾರಿಕೆಕೆ ಹಲವು ಸವಲತ್ತುಗಳನ್ನು ನೀಡುತ್ತಿದ್ದು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ವೈಜ್ಞಾನಿಕ ರೀತಿಯಲ್ಲಿ ಮಾಡಿದರ ಹೈನುಗಾರಿಕೆ ಲಾಭದಾಯಕವಾಗಿದೆ.
-ರಮೇಶ್ ಗೌಡ ಪಜಿಮಣ್ಣು,
ಅಧ್ಯಕ್ಷರು ಹಾಲು ಉತ್ಪಾದಕರ ಸಹಕರ ಸಂಘ ಮುಂಡೂರು