
ಪುತ್ತೂರು : ಬಹು ನಿರೀಕ್ಷಿತ ತೆನ್ಕಾಯಿಮಲೆ ಚಿತ್ರದ ಪ್ರೀಮಿಯರ್ ಶೋ ಪುತ್ತೂರಿನ ಜಿ.ಎಲ್ ಮಹಲ್ ನ ಭಾರತ್ ಸಿನಿಮಾಸ್ ಸೆ. 22 ರಂದು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನ್ಮಥ ಶೆಟ್ಟಿ, ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು, ಧರ್ಮಚಾವಡಿ ತುಳು ಸಿನಿಮಾ ನಿರ್ಮಾಪಕ ಜಗದೀಶ್ ಅಮೀನ್, ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ,ವಸಂತ್ ಮೂಲ್ಯ, ಸುದ್ದಿ ಬಿಡುಗಡೆ ದಿನಪತ್ರಿಕೆಯ ಹಿರಿಯ ವರದಿಗಾರ ಉಮಾಪ್ರಸಾದ್ ರೈ ನಡುಬೈಲು, ಪತ್ರಕರ್ತ ವಿ ಜೆ ವಿಖ್ಯಾತ್, ಚಿತ್ರದ ನಿರ್ದೇಶಕ ರವಿಚಂದ್ರ ರೈ ಮುಂಡೂರು ಹಾಗೂ ಚಿತ್ರ ತಂಡದ ಎಲ್ಲಾ ಸದಸ್ಯರು ಹಾಗೂ ಕಲಾಭಿಮಾನಿಗಳು ಉಪಸ್ಥಿತರಿದ್ದರು. ಈ ಚಿತ್ರವು ಎರಡು ಹೌಸ್ ಫುಲ್ ಷೋಗಳನ್ನು ಕಂಡು ಜನರ ಪ್ರಶಂಸೆಗೆ ಪಾತ್ರವಾಯಿತು.ಚಿತ್ರದ ನಾಯಕಿ ಶ್ರೇಯಾ ಸುಳ್ಯ ಕಾರ್ಯಕ್ರಮ ನಿರೂಪಿಸಿದರು .