ಬಡಗನ್ನೂರು: ಪಡುಮಲೆ ಮದಕ ಶ್ರೀ ರಾಜರಾಜೇಶ್ವರೀ ಕ್ಷೇತ್ರಕ್ಕೆ ಮಂಗಳೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಶ್ರೀ ರಾಜರಾಜೇಶ್ವರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.


ಸಂದರ್ಭದಲ್ಲಿ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ರಾಧಕೃಷ್ಣ ಆಳ್ವ, ಶರನ್ನವರಾತ್ರಿ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಆಳ್ವ, ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೖೆ ಕಟ್ಟಾವು, ಸದಸ್ಯರಾದ ಜನಾರ್ಧನ ಪೂಜಾರಿ ಪದಡ್ಕ, ಶ್ರೀನಿವಾಸ್ ಗೌಡ ಕನ್ನಯ, ಉದಯಕುಮಾರ್ ರಾವ್ ಪಡುಮಲೆ, ಶಂಕರಿ ಪಟ್ಟೆ, ಗ್ರಾ.ಪಂ ಸದಸ್ಯರಾದ ಸಂತೋಷ ಆಳ್ವ ಗಿರಿಮನೆ, ಸುಜಾತಾ ಮೖೆಂದನಡ್ಕ, ಶರನ್ನವರಾತ್ರಿ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಧರ ನಾಯ್ಕ ನೇರ್ಲಂಪಾಡಿ, ಕೋಶಾಧಿಕಾರಿ ಶಿವಕುಮಾರ್ ಮೋಡಿಕೆ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಗಂಗಾಧರ ರೖೆ ಮೇಗಿನಮನೆ ಕಾರ್ಯದರ್ಶಿ ರಾಜೇಶ್ ರೖೆ ಮೇಗಿನಮನೆ, ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ವಾಣಿಶ್ರೀ ಪಡುಮಲೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಊರಿನವರು ಭಾಗವಹಿಸಿದ್ದರು.

ಶರನ್ನವರಾತ್ರಿ ಮಹೋತ್ಸವದ ಸೆ.23ರಂದು ಶ್ರೀ ಕ್ಷೇತ್ರದಲ್ಲಿ ಶ್ರೀ ಕೃಷ್ಣ ಭಜನಾ ಮಂದಿರದ ಮುಡಿಪಿನಡ್ಕ ಇದರ ಸದಸ್ಯರಿಂದ ಭಜನೆ ಹಾಗೂ ವೖೆಧಿಕ ತಂಡದವರಿಂದ ಸಹಸ್ರನಾಮಾದಿ ಪಾರಾಯಣ ನಡೆಯಿತು. ಬಳಿಕ ಶ್ರೀ ದೇವಿಗೆ ಹೂವಿನ ಪೂಜೆ, ಮಹಾಪೂಜಾ ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನ ಪ್ರಸಾದ ವಿತರಣೆ ನಡೆಯಿತು ಕಾರ್ಯಕ್ರಮದಲ್ಲಿ ಸುಮಾರು 350ಕ್ಕೂ ಮಿಕ್ಕಿ ಭಾಗವಹಿಸಿ ಅನ್ನ ಪ್ರಸಾದ ಸ್ವೀಕರಿಸಿದರು.