ನ.19: ಪಡುಮಲೆ ಲಕ್ಷದೀಪೋತ್ಸವ, ಕಾರ್ತಿಕ ಪೂಜಾ ಕಾರ್ಯಕ್ರಮ

0

ಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಈ ಸಂಧರ್ಭದಲ್ಲಿ ಶ್ರೀ ದೇವರಿಗೆ ತಿಂಗಳ ಕಾಲ ವಿಶೇಷ ಕಾರ್ತಿಕ ಪೂಜೆ ನಡೆದು ಕಾರ್ತಿಕ ಮಾಸದ ಕೊನೆಗೆ ಶ್ರೀ ದೇವರಿಗೆ ಲಕ್ಷದೀಪೋತ್ಸವ ಹಾಗೂ ಕಾರ್ತಿಕ ಪೂಜೆ ಕಾರ್ಯಕ್ರಮ ನ.19ರಂದು ಶ್ರೀ ದೇಗುಲದಲ್ಲಿ  ನಡೆಯಲಿದೆ.

ನ.19ರಂದು ಸಂಜೆ 7 ರಿಂದ ಶ್ರೀ ದೇವರಿಗೆ ದೀಪೋತ್ಸವ, 8ರಿಂದ  ಕಾರ್ತಿಕ ಪೂಜೆ ಪ್ರಸಾದ ವಿತರಣೆ  ಬಳಿಕ ಸಾರ್ನಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಭಗವದ್ ಭಕ್ತರಾದ ತಾವೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು, ತನು-ಮನ-ಧನಗಳೊಂದಿಗೆ ಸಹಕರಿಸುವ ಮೂಲಕ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ವ್ಯವಸ್ಥಾಪನ ಸಮಿತಿ, ಅಧ್ಯಕ್ಷರು ಮತ್ತು ಸದಸ್ಯರು  ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here