ನೆಲ್ಯಾಡಿ: ಇಲ್ಲಿನ ಕಾಮಧೇನು ಮಹಿಳಾ ಸಹಕಾರ ಸಂಘದಿಂದ ಸಾಲ ಪಡೆದು ಯಶಸ್ವಿ ಉದ್ದಿಮೆ ನಡೆಸುತ್ತಿರುವ ಮಮತಾ ಹಾಗೂ ಸುನೀತಾ ಅವರನ್ನು ಸೆ.13ರಂದು ನೆಲ್ಯಾಡಿ ಕಾಮಧೇನು ಕಲ್ಪವೃಕ್ಷ ಸಹಕಾರಿ ಸೌಧದ ಕಾಮಧೇನು ಸಭಾಂಗಣದಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷೆ ಉಷಾ ಅಂಚನ್ ಅವರು ಸನ್ಮಾನಿಸಿ ಗೌರವಿಸಿದರು. ಸಂಘದ ನಿರ್ದೇಶಕರು, ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
