ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಡಬ ತಾಲೂಕು ಇದರ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿ ನಡೆಯುತ್ತಿರುವ ವಾತ್ಸಲ್ಯ ಕಾರ್ಯಕ್ರಮದಲ್ಲಿ ಮಾದೇರಿ ಕಾರ್ಯಕ್ಷೇತ್ರದ ಲಕ್ಷ್ಮಿಯವರಿಗೆ ಶ್ರೀ ಕ್ಷೇತ್ರದಿಂದ ನೀಡುತ್ತಿರುವ ಮಾಸಾಶನ ಮಂಜೂರಾತಿ ಪತ್ರವನ್ನು ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕರವರು ನೀಡಿದರು.
ಬಳಿಕ ಮಾತನಾಡಿದ ಬಾಬು ನಾಯ್ಕ್ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅಸಹಾಯಕ ಆಸಕ್ತ ಜನರಿಗೆ ಪ್ರತಿ ತಿಂಗಳು ಮಾಸಾಶನವನ್ನು ನೀಡುತ್ತಿದ್ದು ಯೋಜನೆಯಲ್ಲಿ 20,೦೦೦ ಕುಟುಂಬಗಳು ಈ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಸೆಬಾಸ್ಟಿಯನ್ ಪಿ.ಜೆ., ಮೇಲ್ವಿಚಾರಕರಾದ ಆನಂದ ಡಿ.ಬಿ., ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನ, ಒಕ್ಕೂಟದ ಪದಾಧಿಕಾರಿ ಕಮಲಾಕ್ಷ ಗೌಡ, ಹರ್ಷಿತ, ಸೇವಾ ಪ್ರತಿನಿಧಿ ಸಂತೋಷ್ ಕೆ.ಎಂ.ಉಪಸ್ಥಿತರಿದ್ದರು.