ಪುತ್ತೂರು: ಮಂಗಳೂರಿನ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಬಿ ಜಿ ಎಸ್ ಪದವಿಪೂರ್ವ ಕಾಲೇಜಿನ 2025ರ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಮೂರನೇ ದಿನದ ಸಂಪನ್ಮೂಲ ಕಾರ್ಯಕ್ರಮವು ದ.ಕ.ಜಿ.ಪಂ.ಸ.ಹಿ.ಪ್ರಾ ಶಾಲೆ ರೆಂಜಿಲಾಡಿಯಲ್ಲಿ ಸೆ.26 ರಂದು ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪ್ರವೀಣ್ ಕುಂಟ್ಯಾನ ಅವರು, ಕೃಷಿ ಎನ್ನುವುದು ಮನುಷ್ಯನ ಏಳಿಗೆಗೆ ಕಾರಣವಾಗಿದೆ. ಕೃಷಿ ಪರಿಸರವನ್ನು ಅರ್ಥ ಮಾಡಿಕೊಂಡು ಬದುಕಬೇಕು ಎನ್ನುವ ಯೋಚನೆಯನ್ನು ಮಂಡಿಸಿದರು.

ಜಯಪ್ರಕಾಶ ಪೆತ್ತಲ ಅವರು ಮಾತನಾಡುತ್ತಾ ಜೇನು ಸಾಕಾಣಿಕೆಯ ವಿವಿಧ ಆಯಾಮಗಳನ್ನು ತಿಳಿಸಿದರಲ್ಲದೆ. ಜೇನುಗೂಡು ಇತ್ಯಾದಿಯ ಪ್ರಾತ್ಯಕ್ಷತೆಯನ್ನು ಮಕ್ಕಳಿಗೆ ನೀಡಿದರು.
ಸಮಾರಂಭದಲ್ಲಿ ಜೋಸೆಫ್ ಪಿ.ಜೆ, ಸದಾನಂದ ಗೌಡ, ಬಾಲಕೃಷ್ಣ ಗೌಡ, ಪೂರ್ಣೇಶ್ ಗೌಡ, ಬಾಬುಗೌಡ, ಸುರೇಶ್ ಗೌಡ, ರಕ್ಷಿತ್ ಪುತ್ತಿಲ ಸಮಾರಂಭದಲ್ಲಿ ಭಾಗವಹಿಸಿದ್ದರು.
ಕುಸುಮಾದರ ದೊಡ್ಡ ಕೊಪ್ಪ ಇವರಿಂದ ಮಡಿಕೆ ಮಾಡುವುದರ ಬಗ್ಗೆ ಅರಿವು ಮೂಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಬಿ ಜಿ ಎಸ್ ಕಾಲೇಜಿನ ಪ್ರಾಂಶುಪಾಲ ಡಾ. ಸುಬ್ರಮಣ್ಯ ಸಿ ಕುಂದೂರು ವಹಿಸಿದ್ದರು. ಯೋಜನಾಧಿಕಾರಿಗಳಾದ ಮುಖೇಶ್ ಕುಮಾರ್, ದೈಹಿಕ ಶಿಕ್ಷಕರಾದ ಯಶವಂತ್ ಹಾಗೂ ಶಿಬಿರಾರ್ಥಿಗಳು ಮತ್ತು ಊರಿನ ಗಣ್ಯರು ಸಭೆಯಲ್ಲಿದ್ದರು. ಕಾರ್ಯಕ್ರಮವನ್ನು ನವ್ಯಶ್ರೀ ನಿರೂಪಿಸಿ. ಮೈತ್ರಿ ಸ್ವಾಗತಿಸಿ, ಗಣ್ಯಶ್ರೀ ವಂದಿಸಿದರು.