ಬಡಗನ್ನೂರು: ಮದಕ ಶ್ರೀ ರಾಜರಾಜೇಶ್ವರಿ ದೇವಿಗೆ ಪಡುಮಲೆ ರಮಾದೇವಿ ಮತ್ತು ಲಕ್ಷ್ಮಿ ನಾರಾಯಣ ರಾವ್ ದಂಪತಿಗಳು ಸುಮಾರು 35ಸಾವಿರ ವೆಚ್ಚದ ಕಂಚಿನ ಪ್ರಬಲ್ಯ ಸಮರ್ಪಣೆ ಮಾಡಿದರು. ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.

ಈ ಸಂಧರ್ಭದಲ್ಲಿ ಕುಟುಂಬಸ್ಥರಾದ ಶಾಂತಕುಮಾರಿ ಪಡುಮಲೆ , ಮನೋಜ್ ಕುಮಾರ್ ಪಡುಮಲೆ ಶರನ್ನವರಾತ್ರಿ ಸಮಿತಿ ಆಧ್ಯಕ್ಷ ಚಂದ್ರಶೇಖರ ಆಳ್ವ ಗಿರಿಮನೆ ಸಮಿತಿ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು