ಬಡಗನ್ನೂರು : ಸುಳ್ಯಪದವು ಇಲ್ಲಿನ ಆಯುಧ ಪೂಜಾ ಸೇವಾ ಸಮಿತಿ ವತಿಯಿಂದ 30 ವರ್ಷದ ಸಾರ್ವಜನಿಕ ಆಯುಧ ಪೂಜೆ,ವಿವಿಧ ಆಟೋಟ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಅ. 1ರಂದು ಸುಳ್ಯಪದವು ಪೇಟೆಯಲ್ಲಿ ನಡೆಯಲಿದೆ.
ಬೆಳಿಗ್ಗೆ ಶ್ರೀ ಗಣಪತಿ ಹೋಮ,ಶ್ರೀ ಕೃಷ್ಣ ಭಜನಾ ಮಂಡಳಿ ಮುಡಿಪಿನಡ್ಕ,ಶ್ರೀ ಮಹಾವಿಷ್ಣು ಸಾಂಸ್ಕೃತಿಕ ಕಲಾ ಸಂಘ ಸುಳ್ಯಪದವು, ಮಿತ್ರ ಭಜನಾರ್ಚನಾ ಸಂಘ ಬೆಳ್ಳೂರು ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಕುಳ ತರವಾಡು ಮನೆಯ ಮುಖ್ಯಸ್ಥ ದಾಮೋದರ ಎನ್.ಎ.,ವಿವಿಧ ಸ್ಪರ್ಧೆಗಳ ಉದ್ಘಾಟನೆ ನೆರವೇರಿಸಲಿದ್ದಾರೆ.
1 ಮತ್ತು 2ನೇ ತರಗತಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಕಪ್ಪೆ ಜಿಗಿತ, 3 ಮತ್ತು 4ನೇ ತರಗತಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸೂಜಿಗೆ ನೂಲು ಹಾಕುವುದು,5 4 ಮತ್ತು 7ನೇ ತರಗತಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ಲಾಸ್ಟಿಕ್ ಬಾಲ್ ಎಸೆತ,8,9 ಮತ್ತು 10ನೇತರಗತಿ ವಿದ್ಯಾರ್ಥಿನಿಯರಿಗೆ ಮೈಲ್ ರೇಸ್ 8,9 ಮತ್ತು 10ನೇ ತರಗತಿ ವಿದ್ಯಾರ್ಥಿನಿಯರಿಗೆ ಸಂಗೀತ ಕುರ್ಚಿ, ಬೆಳಿಗ್ಗೆ ಗಂಟೆ 10ರಿಂದ ವಾಹನ ಪೂಜೆ,ಪೂರ್ವಾಹ್ನ ಗಂಟೆ 10.30 ರಿಂದ ಮಹಿಳೆಯರ ಹಗ್ಗಜಗ್ಗಾಟ (7 ಮಹಿಳೆಯರ ಮುಕ್ತ ಪಂದ್ಯಾಟ),ಬೆಳಿಗ್ಗೆ 11.00 ರಿಂದ ಪುರುಷರ ಮ್ಯಾ ಟ್ ಕಬಡ್ಡಿ ಪಂದ್ಯಾಟ ನಡೆಯಲಿದೆ. ಮಧ್ಯಾಹ್ನ ಭಜನಾ ಮಂಗಲ, ಮಹಾಪೂಜೆ, ಪ್ರಸಾದ ವಿತರಣೆ,ಪ್ರಸಾದ ಭೋಜನ (ಅನ್ನ ಸಂತರ್ಪಣೆ) ನಡೆಯಲಿದೆ.
ಸಂಜೆ ನಡೆಯುವ ಬಹುಮಾನ ವಿತರಣೆ ಮತ್ತು ಗೌರವಾರ್ಪಣೆ ಸಭಾ ಕಾರ್ಯಕ್ರಮವು ಸುಳ್ಯಪದವು ಆಯುಧ ಪೂಜಾ ಸೇವಾ ಸಮಿತಿಯ ಅಧ್ಯಕ್ಷ ಗಿರೀಶ್ ಕುಮಾರ್ ಕನ್ನಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಆರ್ ಟಿ ಒ ಅಧಿಕಾರಿ ಆನಂದ ಗೌಡ, ಪೆರಾಜೆ ಜ್ಯೋತಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಸುರೇಶ್ ಹೆಗ್ಡೆ ಕುಳದಪಾರೆ, ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಲತ ದೇವಕಜೆ ಭಾಗವಹಿಸಲಿದ್ದಾರೆ.
ಪದ್ಮಶ್ರೀ ಪುರಸ್ಕೃತ ಸತ್ಯನಾರಾಯಣ ಬೆಳೇರಿ,ನಿವೃತ್ತ ಸಹಾಯಕ ಪೋಲಿಸ್ ಉಪನಿರೀಕ್ಷಕ ಬಿ. ರವೀಂದ್ರನಾಥ ರೈ ಬೋಳಂಕೂಡ್ಲು ಇವರಿಗೆ ಗೌರವಾರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 7.00 ರಿಂದ ಚೈತನ್ಯ ಕಲಾವಿದರು ಬೈಲೂರು ಇವರಿಂದ ಅಷ್ಟಮಿ ತುಳು ನಾಟಕ ನಡೆಯಲಿದೆ.