ಪುತ್ತೂರು: ಬಿಜೆಪಿ ಸುಳ್ಯಮಂಡಲ, ಕುಟ್ರುಪ್ಪಾಡಿ ಮಹಾಶಕ್ತಿ ಕೇಂದ್ರ, ಸವಣೂರು ಶಕ್ತಿ ಕೇಂದ್ರದ ಸವಣೂರು ಬೂತ್ ಸಮಿತಿ 65 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 126ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿಯವರ ನಿವಾಸದಲ್ಲಿ ಆಲಿಸಲಾಯಿತು. ಬಳಿಕ ಬೂತ್ ಸಮಿತಿ ಸಭೆ ನಡೆಸಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಶಕ್ತಿ ಕೇಂದ್ರದ ಪ್ರಮುಖ ಚೇತನ್ ಕೋಡಿಬೈಲು, ಬೂತ್ ಸಮಿತಿ ಅಧ್ಯಕ್ಷ ತೀರ್ಥರಾಮ ಕೆಡೆಂಜಿ, ಕಾರ್ಯದರ್ಶಿ ಸತೀಶ್ ಬಲ್ಯಾಯ, ಮಂಡಲದ ಹಿಂದುಳಿದ ವರ್ಗ ಮೋರ್ಚಾದ ಕಾರ್ಯದರ್ಶಿ ಚಂದ್ರಾವತಿ ಸುಣ್ಣಾಜೆ, ಗ್ರಾಮ ಪಂಚಾಯತ್ ಸದಸ್ಯರಾದ ರಾಜೀವಿ ವಿ ಶೆಟ್ಟಿ , ಸವಣೂರು ಸಿ ಎ ಬ್ಯಾಂಕ್ ನಿರ್ದೇಶಕ ಅಶ್ವಿನ್ ಎಲ್ ಶೆಟ್ಟಿ, ಬಿಜೆಪಿ ಪದಾಧಿಕಾರಿಗಳಾದ ಪ್ರಕಾಶ ಕುದ್ಮನಮಜಲು, ಕಾರ್ತಿಕ್ ಮಜಲುಮಾರು, ಅಶೋಕ್ ಉಪಸ್ಥಿತರಿದ್ದರು.