ಸೆ.30( ನಾಳೆ) ಸಿ.ಆರ್.ಪಿ.ಎಫ್ ಯೋಧ ಶೇಷಪ್ಪ ಗೌಡ ನೀರ್ಪಾಡಿ  ಸೇವಾ ನಿವೃತ್ತಿ

0

ನಿಡ್ಪಳ್ಳಿ : ಸೆಂಟ್ರಲ್ ರಿಸರ್ವ್ ಪೊಲೀಸ್ ಫೊರ್ಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಒಳಮೊಗ್ರು ಗ್ರಾಮದ ನೀರ್ಪಾಡಿ ಶೇಷಪ್ಪ ಗೌಡ ಎಂಬವರು ಸೆ.30 ರಂದು ಬೆಂಗಳೂರಿನ ಯಲಹಂಕದಲ್ಲಿ ತನ್ನ ಸೇವಾ ನಿವೃತ್ತಿ ಹೊಂದುತ್ತಿದ್ದಾರೆ.

ಇವರು 1998 ರಲ್ಲಿ  ಸೇನೆಯಲ್ಲಿ ದೇಶದ ಸೇವೆಗೆ ಸೇರ್ಪಡೆ ಗೊಂಡು ಅರುಣಾಚಲ ಪ್ರದೇಶ, ಪಂಜಾಬ್, ಅಸ್ಸಾಂ, ಮಣಿಪುರ, ಉತ್ತರ ಪ್ರದೇಶ, ತಮಿಳ್ನಾಡು, ಕೇರಳದ ಪಲ್ಲಿಪುರಂ, ಬೆಂಗಳೂರಿನ ಯಲಹಂಕ ಮುಂತಾದ ಕಡೆ  ಒಟ್ಟು ಸುಮಾರು 37 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿದ್ದಾರೆ.

 ಇವರು ಒಳಮೊಗ್ರು ಗ್ರಾಮದ ನೀರ್ಪಾಡಿ ದಿ.ಕೊರಗಪ್ಪ ಗೌಡ ಮತ್ತು ಪೊನ್ನಕ್ಕ ದಂಪತಿಗಳ ಪುತ್ರರಾಗಿದ್ದಾರೆ. ಇವರು ಪತ್ನಿ ಚಿತ್ರಾ, ಪುತ್ರಿಯರಾದ ವಿಂಧ್ಯಾ, ಕವನ ಮತ್ತು ಪುತ್ರ ಯಶಸ್ ರವರೊಂದಿಗೆ ಪ್ರಸ್ತುತ ಶೇಖಮಲೆಯ ಬೊಳ್ಳಾಡಿ ಎಂಬಲ್ಲಿ ವಾಸ್ತವ್ಯ ಹೊಂದಿರುತ್ತಾರೆ.

LEAVE A REPLY

Please enter your comment!
Please enter your name here