ಪುತ್ತೂರು:ರೈ ಎಸ್ಟೇಟ್ ಎಜ್ಯಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಮೂಲಕ ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿಸಿರುವ 240 ಮಂದಿಗೆ ಆಟೋ ಚಾಲಕರು ಮತ್ತು ಕಟ್ಟಡ ಕಾರ್ಮಿಕರಿಗೆ ಉಚಿತ ಗುರುತಿನ ಚೀಟಿ ವಿತರಣೆಯು ಸೆ.27ರಂದು ಶಾಸಕರ ಭವನದಲ್ಲಿ ನಡೆಯಿತು.
ಕಾರ್ಡ್ ವಿತರಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಕಳೆದ 10 ವರ್ಷಗಳಿಂದ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಸರಕಾರದ ಯೋಜನೆಗಳನ್ನು ಬಡವರ ತಲುಪಿಸುವುದೇ ನಮ್ಮ ಧ್ಯೇಯವಾಗಿದೆ. ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸುವಾಗ ಕಾರ್ಮಿಕರು ಪಾವತಿಸಬೇಕಾದ ಮೊತ್ತವನ್ನು ಟ್ರಸ್ಟ್ನಿಂದ ಪಾವತಿಸಿ, ಕಾರ್ಮಿಕರಿಗೆ ಉಚಿತವಾಗಿ ನೀಡಲಾಗುತ್ತಿದೆ. ಇದನ್ನು ನವೀಕರಣ ಮಾಡಿಕೊಳ್ಳಬೇಕು. ಕೇವಲ ಓಟಿಗಾಗಿ ನೀಡುವುದಲ್ಲ. ಟ್ರಸ್ಟ್ನಿಂದ ನಾವು ಕಷ್ಟಕಟ್ಟು ನೀಡಿದ್ದೇವೆ. ಉಚಿತವಾಗಿ ದೊರೆತಿದೆ ಎಂದು ಉಪಯೋಗಿಸದೇ ಇರಬಾರದು. ಫಲಾನುಭವಿಗಳಿಗೆ ಉಚಿತವಾಗಿ ದೊರೆತಿದ್ದರೂ ನಾವು ಹಣ ಪಾವತಿಸುತ್ತೇವೆ. ಹೀಗಾಗಿ ಸೌಲಭ್ಯಗಳನ್ನು ಪಡೆದುಕೊಂಡವರು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳುವ ಜೊತೆಗೆ ಇತರರಿಗೂ ಮಾಹಿತಿ ನೀಡಬೇಕು ಎಂದು ಹೇಳಿದರು. ಕಾರ್ಮಿಕ ಇಲಾಖೆಯ ಹಿರಿಯ ಕಾರ್ಮಿಕ ಇಲಾಖೆಯ ಗಣಪತಿ ಹೆಗ್ಡೆ ಮಾತನಾಡಿ, ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
250ಮಂದಿಗೆ ಕಾರ್ಡ್ ವಿತರಣೆ:
ಟ್ರಸ್ಟ್ ಮೂಲಕ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿದ 90 ಮಂದಿ ಆಟೋ ಚಾಲಕರು ಹಾಗೂ 150 ಮಂದಿ ಕಟ್ಟಡ ಕಾರ್ಮಿಕರು ಸೇರಿದಂತೆ ಒಟ್ಟು 240 ಮಂದಿಗೆ ಕಾರ್ಯಕ್ರಮದಲ್ಲಿ ಗುರತಿನ ಚೀಟಿ ವಿತರಿಸಲಾಯಿತು.
ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ನಗರ ಯೋಜನಾ ಪ್ರಾಧೀಕಾರದ ಸದಸ್ಯ ನಿಹಾಲ್ ಶೆಟ್ಟಿ, ರೈ ಎಸ್ಟೇಟ್ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪ್ರಧಾನ ಕಾರ್ಯದರ್ಶಿ ರೋಷನ್ ರೈ ಬನ್ನೂರು, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ಆಳ್ವ, ಮುರಳೀಧರ ಐ ಮಠಂತಬೆಟ್ಟು, ಯಂಗ್ ಬ್ರಿಗೇಡ್ ಅಧ್ಯಕ್ಷ ರಂಜಿತ್ ಬಂಗೇರ, ಆರ್ಯಾಪು ಗ್ರಾ.ಪಂ ಸದಸ್ಯರ ಪೂರ್ಣಿಮಾ ರೈ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ ಉಪಸ್ಥಿತರಿದ್ದರು. ಟ್ರಸ್ಟ್ನ ಲಿಂಗಪ್ಪ ಸ್ವಾಗತಿಸಿ, ವಂದಿಸಿದರು.