ಬಡಗನ್ನೂರು ಮಾದಕ ವಸ್ತು ವಿರೋಧಿ ದಿನ ಆಚರಣೆ

0

ಬಡಗನ್ನೂರು :  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಪುತ್ತೂರು ತಾಲೂಕು, ಅರಿಯಡ್ಕ ವಲಯದ ಬಡಗನ್ನೂರು ಕಾರ್ಯಕ್ಷೇತ್ರದ  ಬಡಗನ್ನೂರು ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯಲ್ಲಿ  ಮಾದಕ ವಸ್ತು ವಿರೋಧಿ ದಿನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಒಕ್ಕೂಟ ಅಧ್ಯಕ್ಷ  ಸುಬ್ಬಯ್ಯ ರೈ ಪೆಲತ್ತಡ್ಡಿ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಸಂಪನ್ಮೂಲ ವ್ಯಕ್ತಿಯಾಗಿ  ಪ್ರಗತಿ ಪರ ಕೃಷಿಕಾರದ  ಪೂರ್ಣಾತ್ಮರಾಮ್ ಸದಸ್ಯರಿಗೆ ಮಾದಕ ವ್ಯಸನದಿಂದ ಉಂಟಾಗುವ ಅಪಾಯಗಳು, ಬೆಳೆಯುವ ಮಕ್ಕಳು ಹಾದಿ ತಪ್ಪುವ ಕುರಿತು, ಮನೆಯಲ್ಲಿ ಪೋಷಕರು ಕೈಗೊಳ್ಳಬೇಕಾದ ಜವಾಬ್ದಾರಿ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಜನಜಾಗೃತಿ ವಲಯಾಧ್ಯಕ್ಷ   ವಿಕ್ರಂ ರೈ ಸಾಂತ್ಯ, ಮೇಲ್ವಿಚಾರಕ  ಹರೀಶ್ ಕುಲಾಲ್, ಒಕ್ಕೂಟದ ಪದಾಧಿಕಾರಿಗಳಾದ  ಶಿವಶಂಕರ, ದಿನೇಶ್, ಭಾರತಿ ಉಪಸ್ಥಿತರಿದ್ದರು. ಸೇವಾಪ್ರತಿನಿಧಿ  ಸಾವಿತ್ರಿರವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಸಂಗಮ ಸಂಘದ ಸದಸ್ಯರಾದ ಜೋಹಾರಭಿ  ಸ್ವಾಗತಿಸಿ, ಶ್ರೀದೇವಿ ಸಂಘದ.  ಲತಾ ವಂದಿಸಿದರು.

LEAVE A REPLY

Please enter your comment!
Please enter your name here