ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ದಿನಾಚರಣೆ

0

ಪುತ್ತೂರು:ಪುತ್ತೂರು ಅಕ್ಷಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ರಾಷ್ಟ್ರೀಯ ಸೇವಾ ದಿನಾಚರಣೆಯನ್ನು ಆಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು ವಹಿಸಿ “NSS ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಹಕಾರ ಮತ್ತು ಸಮಾಜಮುಖಿ ದೃಷ್ಟಿಕೋನವನ್ನು ಬೆಳೆಸುತ್ತವೆ. ಇವರ ಸೇವಾ ಚಟುವಟಿಕೆಗಳು ಸಮಾಜದ ಬೆಳವಣಿಗೆಗೆ ಅಗತ್ಯ. ವಿದ್ಯಾರ್ಥಿಗಳು ತಂಡಬದ್ಧತೆಯೊಂದಿಗೆ ಕಾರ್ಯನಿರ್ವಹಿಸಬೇಕು. NSS ಚಟುವಟಿಕೆಗಳು ಅವರನ್ನು ಜವಾಬ್ದಾರಿಯುತ ನಾಗರಿಕರಾಗಿ ರೂಪಿಸುತ್ತವೆ” ಎಂದರು.

ಕಾರ್ಯಕ್ರಮದ ಉದ್ಘಾಟಕ ವಿವೇಕಾನಂದ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಅಂಡ್ ಕಾಮರ್ಸ್ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಅರುಣ್ ಪ್ರಕಾಶ್ ಮಾತನಾಡಿ, NSS ಕಾರ್ಯಕ್ರಮವು ಯುವಜನರಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಅತ್ಯುತ್ತಮ ವೇದಿಕೆ. ವಿದ್ಯಾರ್ಥಿಗಳು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಉತ್ತಮ ನಾಗರಿಕರಾಗಿ ಬೆಳೆಯಬೇಕು. ಇದು ತಂಡಬದ್ಧತೆಯನ್ನು, ಸಹಕಾರವನ್ನು ಮತ್ತು ಜೀವನ ಮೌಲ್ಯಗಳನ್ನು ಕಲಿಸುತ್ತದೆ. ಸಮುದಾಯದ ಬೆಳವಣಿಗೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ. NSS ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.” ಎಂದರು.

ಮುಖ್ಯ ಅತಿಥಿ ಬಿರುಮಲೆ ಪ್ರಜ್ಞಾ ಆಶ್ರಮದ ಅಣ್ಣಪ್ಪ ಕೆ. ಎಂ. ನೂತನ ರಾಷ್ಟ್ರೀಯ ಸೇವಾ ಯೋಜನ ಕಛೇರಿ ಉದ್ಘಾಟಿಸಿ ಮಾತನಾಡಿ “ವಿದ್ಯಾರ್ಥಿಗಳ ಸೇವಾ ಚಟುವಟಿಕೆಗಳು ಸಮುದಾಯಕ್ಕೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. NSS ಚಟುವಟಿಕೆಗಳಲ್ಲಿ ಯುವಜನರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ. ಯುವಜನರು ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಈ ಕಾರ್ಯಗಳು ಅವರನ್ನು ಉತ್ತಮ ನಾಗರಿಕರಾಗಿ ರೂಪಿಸುತ್ತವೆ. ಸೇವಾಭಾವವು ಜೀವನದ ಮುಖ್ಯ ಅಂಶವಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ ಪಕ್ಕಲ ಮಾತನಾಡಿ, “ವಿದ್ಯಾರ್ಥಿಗಳು NSS ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಸೇವಾಭಾವವನ್ನು ಅರಿತುಕೊಳ್ಳುತ್ತಾರೆ. ಈ ಕಾರ್ಯಚಟುವಟಿಕೆಗಳು ಅವರಿಗೆ ಜೀವನ ಮೌಲ್ಯಗಳನ್ನು ಕಲಿಸುತ್ತವೆ. ಯುವಜನರಲ್ಲಿ ಸಾಮಾಜಿಕ ಜವಾಬ್ದಾರಿಯ ಮನೋಭಾವವನ್ನು ಬೆಳೆಸುತ್ತವೆ. ಸಮುದಾಯಕ್ಕೆ ನೀಡುವ ಸೇವೆಯ ಮಹತ್ವವನ್ನು ತಿಳಿಸುತ್ತವೆ. NSS ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಸಹಾಯಕ.” ಎಂದರು. ಪ್ರಾಂಶುಪಾಲ ಸಂಪತ್ತ್ ಕೆ ಪಕ್ಕಲ ರಚಿಸಿದ ರಾಷ್ಟ್ರೀಯ ಸೇವಾ ಯೋಜನೆ ಕುರಿತಾದ ಸೇವಾಗೀತೆಯನ್ನು NSS  ಸ್ವಯಂ ಸೇವಕಿಯರು ಹಾಡಿದರು.

ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ರಾಷ್ಟ್ರೀಯ ಸೇವಾ ಯೋಜನ ಸ್ವಯಂ ಸೇವಕರಿಗೆ ಮತ್ತು ಕಾಲೇಜಿನ ಸ್ವಯಂ ಸೇವಕರಿಗೆ ಆಯೋಜಿಸಲಾದ ಆನ್ಲೈನ್ ಮೂಲಕ ನಡೆಸಿದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು.ವಿವಿಧ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಸ್ವಯಂ ಸೇವಕರು ಭಾಗವಹಿಸಿದ್ದರು. 2024- 25 ರ ಸಾಲಿನ ಅತ್ಯುತ್ತಮ ಸ್ವಯಂ ಸೇವಕ – ಸೇವಕಿ ಪ್ರಶಸ್ತಿಗೆ ವಿಂದು ಶ್ರೀ, ತೃತೀಯ ಬಿಕಾಂ ಹಾಗೂ ಜ್ ಎಂ ಅಖಿಲೇಶ್ ಭಾಜನರಾದರು.

ಕಾರ್ಯಕ್ರಮದಲ್ಲಿ ಘಟಕ-I ಕಾರ್ಯಕ್ರಮಾಧಿಕಾರಿ ರಾಕೇಶ್ ಕೆ ಪ್ರಸ್ತಾವಿಸಿದರು. ಘಟಕ-II ಕಾರ್ಯಕ್ರಮಾಧಿಕಾರಿ ಮೇಘಶ್ರೀ ಉಪಸ್ಥಿತರಿದ್ದರು.ರಾಷ್ಟ್ರೀಯ ಸೇವಾ ಯೋಜನ ಘಟಕ ನಾಯಕ ನಾಯಕಿಯರು, ಸ್ವಯಂ ಸೇವಕಿಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸ್ವಯಂ ಸೇವಕಿಯರು ಪ್ರಾರ್ಥಿಸಿ, ಅಪೇಕ್ಷಾ ಜೆ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here