ಪುತ್ತೂರು: ನವೋದಯ ಪ್ರೌಢಶಾಲೆಯಲ್ಲಿ ನವಚೇತನ NMMS ಶಿಬಿರದ ಸಮಾರೋಪ ಕಾರ್ಯಕ್ರಮ ಸೆ.27ರಂದು ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವೋದಯ ಆಡಳಿತ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ಭಟ್ ಘಾಟೆ ವಹಿಸಿ, ಶಿಬಿರಾರ್ಥಿಗಳಿಗೆ ನಿರಂತರ ಅಭ್ಯಾಸವನ್ನು ಮಾಡುವುದರ ಮೂಲಕ ಎಲ್ಲರೂ ಸಾಧನೆ ಮಾಡುವಂತಾಗಲಿ ಎಂದರು. ಮುಖ್ಯ ಅತಿಥಿ, ದ.ಕ.ಜಿ.ಪ.ಹಿ.ಪ್ರಾ.ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಭಾಸ್ಕರ ಕರ್ಕೇರಾ ಬಾಲ್ಯದ ನೆನಪುಗಳನ್ನು ಮಾಡುತ್ತಾ, ಶಿಬಿರದ ಪ್ರಯೋಜನವನ್ನು ತಿಳಿಸಿದರು. ಆಡಳಿತ ಮಂಡಳಿಯ ವತಿಯಿಂದ ಇವರನ್ನು ಗೌರವಿಸಲಾಯಿತು.
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗಣೇಶ್ ರೈ ಶುಭ ಹಾರೈಸಿದರು. ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಚಂದ್ರಹಾಸ ಮೂರೂರು ಶಿಬಿರಾರ್ಥಿಗಳು ಡಿಸೆಂಬರ್ 7ರಂದು ನಡೆಯಲಿರುವ NMMS ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಸಾಧನೆ ಮಾಡುವಂತೆ ಪ್ರೇರೇಪಿಸಿ, ಶಿಬಿರದಲ್ಲಿ ಕಲಿತ ವಿಚಾರಗಳೇ ಮುಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭದ್ರವಾದ ಬುನಾದಿ ಎಂಬುದನ್ನು ತಿಳಿಸಿದರು.
ಸಹ ಶಿಕ್ಷಕಿ ಭುವನೇಶ್ವರಿ ಎಂ. ಶಿಬಿರಾರ್ಥಿಗಳಿಗೆ ನಡೆಸಿದ NMMS- ಅಣಕು ಪರೀಕ್ಷೆಯ ವಿಶ್ಲೇಷಣೆಯನ್ನು ಮಾಡಿ,ಭಾಗವಹಿಸಿದ ಎಲ್ಲಾ ಮಕ್ಕಳ ಪಟ್ಟಿಯನ್ನು ವಾಚಿಸಿದರು. ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಮಕ್ಕಳನ್ನು ವಿಶೇಷವಾಗಿ ಮತ್ತು ಭಾಗವಹಿಸಿದ ಎಲ್ಲಾ ಮಕ್ಕಳನ್ನೂ ಆಡಳಿತ ಮಂಡಳಿಯ ವತಿಯಿಂದ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ಶಾಲಾ ಶಿಕ್ಷಕಿಯರಾದ ಭುವನೇಶ್ವರಿ, ಸುಮಂಗಲಾ, ಶೋಭಾ ಮತ್ತು ಗೌತಮಿ MAT ಹಾಗೂ SATನ ವಿವಿಧ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸುವ ವಿಧಾನವನ್ನು ತಿಳಿಸಿದರು.ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಾಲಾ ಹಿರಿಯ ಶಿಕ್ಷಕಿ ಸುಮಂಗಲಾ ಕೆ ಸ್ವಾಗತಿಸಿದರು. ಶಿಕ್ಷಕ ರಾಧಾಕೃಷ್ಣ ಕೋಡಿ ವಂದಿಸಿದರು. ಶಿಕ್ಷಕಿ ಶೋಭಾ ಬಿ ಕಾರ್ಯಕ್ರಮವನ್ನು ನಿರ್ವಹಿಸಿದರು.ಶಾಂತದುರ್ಗ ದೇವಸ್ಥಾನದಲ್ಲಿ ನಡೆದ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿ, ಬಹುಮಾನ ಪಡೆದ ಮಕ್ಕಳ ಪಟ್ಟಿಯನ್ನು ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಪಿ ವಾಚಿಸಿದರು. ಶಿಕ್ಷಕಿ ಗೌತಮಿ, ಕಚೇರಿ ಸಿಬ್ಬಂದಿ ನಾರಾಯಣ ಬನ್ನೆಂತಾಯ ಹಾಗೂ ಅಡುಗೆ ಸಿಬ್ಬಂದಿಗಳು ಸಹಕರಿಸಿದರು.

ಸೆ.24ರಂದು ನರೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನುಭೋಗ ತರಬೇತಿಯನ್ನು ನೀಡಿದರು. ಸೆ.25ರಂದು ಸರಕಾರಿ ಪದವಿ ಪೂರ್ವ ಕಾಲೇಜ್ ಕಬಕದ ಭೌತಶಾಸ್ತ್ರ ಉಪನ್ಯಾಸಕ ಶ್ರೀನಿವಾಸ ಬಡೆಕ್ಕಿಲ್ಲಾಯ ಭೌತಶಾಸ್ತ್ರ ಮತ್ತು ಬೀಜಗಣಿತದ ಸಮಸ್ಯೆಗಳನ್ನು ಬಿಡಿಸುವ ವಿಧಾನವನ್ನು ತಿಳಿಸಿಕೊಟ್ಟರು.