ಪುತ್ತೂರು; ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇವರ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರಗಿದ ಸೌಹಾರ್ದ ಸಹಕಾರಿಗಳ ರಜತಮಹೋತ್ಸವ ಸಮಾವೇಶ ಸಂದರ್ಭದಲ್ಲಿ ಸಹಕಾರರತ್ನ ಪುರಸ್ಕೃತರಾದ, ಆರ್ಬಿಐನ ಮಾಜಿ ನಿರ್ದೇಶಕರೂ ಆಗಿರುವ, ಪುತ್ತೂರಿನ ಅಗರಿ ನವೀನ್ ಭಂಡಾರಿಯವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕೇಂದ್ರ ಸಚಿವ ಪ್ರಹಲ್ಲಾದ್ ಜೋಷಿ ಸೇರಿದಂತೆ ಅನೇಕ ಗಣ್ಯರು ಹಾಗೂ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಮಾವೇಶದಲ್ಲಿ ಉಪಸ್ಥಿತರಿದ್ದರು.