ಜಾರಿ ನಿರ್ದೇಶನಾಯಲದ ಪರ ಹೈಕೋರ್ಟ್ ವಕೀಲರಾಗಿ ಪಾಣಾಜೆಯ ರಾಜಾರಾಮ್ ಸೂರ್ಯಂಬೈಲು ನೇಮಕ

0

ಪುತ್ತೂರು: ಭಾರತ ಸರಕಾರದ ಕಾನೂನು ಜಾರಿ ಮತ್ತು ಆರ್ಥಿಕ ಗುಪ್ತಚರ ಸಂಸ್ಥೆಯಾದ ಜಾರಿ ನಿರ್ದೇಶನಾಲಯ (ಇ.ಡಿ.)ದ ಪರವಾಗಿ ವಿವಿಧ ರಾಜ್ಯಗಳ ಹೈಕೋರ್ಟ್‌ಗಳಲ್ಲಿ ವಾದ ಮಾಡಲು ವಕೀಲರ ಪೆನಲ್ ನೇಮಕಾತಿ ನಡೆದಿದ್ದು, ಕರ್ನಾಟಕ ಹೈಕೋರ್ಟ್‌ನಲ್ಲಿ ಇ.ಡಿ. ಪರ ವಕೀಲರಾಗಿ ಪುತ್ತೂರಿನ ಪಾಣಾಜೆ ಗ್ರಾಮದ ಸೂರ್ಯಂಬೈಲು ನಿವಾಸಿ, ಕರ್ನಾಟಕ ಹೈಕೋರ್ಟ್‌ನ ವಕೀಲರಾದ ರಾಜಾರಾಮ ಸೂರ್ಯಂಬೈಲುರವರನ್ನು ನೇಮಕ ಮಾಡಲಾಗಿದೆ.


ಕರ್ನಾಟಕ ಹೈಕೋರ್ಟ್ ಬೆಂಗಳೂರು ವಿಭಾಗಕ್ಕೆ ಒಟ್ಟು 5 ವಕೀಲರನ್ನು ನೇಮಿಸಲಾಗಿದ್ದು, ಅದರಲ್ಲಿ ಇವರೂ ಓರ್ವರಾಗಿದ್ದಾರೆ. ರಾಜಾರಾಮ ರವರು ಪೆರ್ಲ ಸತ್ಯನಾರಾಯಣ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣ, ಪಾಣಾಜೆ ಸುಬೋಧ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣವನ್ನು, ವಿವೇಕಾನಂದ ಪದವಿ ಕಾಲೇಜಿನಲ್ಲಿ ಪದವಿ, ಎಸ್‌ಡಿಎಂ ಲಾ ಕಾಲೇಜು ಮಂಗಳೂರಿನಲ್ಲಿ
ಎಲ್‌ಎಲ್‌ಬಿ, ಎಲ್‌ಎಲ್‌ಮ್ ಉನ್ನತ ಶಿಕ್ಷಣವನ್ನು ಮಾಡಿರುತ್ತಾರೆ.


ಕಳೆದ 10 ವರ್ಷಗಳಿಂದ ಇವರು ಕೇಂದ್ರ ಸರಕಾರದ ಪರವಾಗಿ ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದಾರೆ. ಬಿಡಿಎ ವಕೀಲರಾಗಿ 10 ವರ್ಷ, ಕರ್ನಾಟಕ ಅರ್ಬನ್ ಡೆವಲಪ್‌ಮೆಂಟ್ ವಾಟರ್ ಸಪ್ಲಾಯ್ ಸಿವೇಜ್ ಬೋರ್ಡ್‌ನ ಹೈಕೋರ್ಟ್ ವಕೀಲರಾಗಿಯೂ ಅನುಭವವಿರುವ ಇವರು ಕೇಂದ್ರ ಸರಕಾರದ ಪರವಾಗಿ ಬ್ಯಾಂಕಿಂಗ್ ಅಮಾಲ್ಗಮೇಷನ್ ಅವಧಿಯಲ್ಲಿ ಹೈಕೋರ್ಟ್‌ನಲ್ಲಿ ವಾದಿಸಿರುತ್ತಾರೆ. ಪೆರ್ಲ ಸತ್ಯನಾರಾಯಣ ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯಶಿಕ್ಷಕ ದಿ. ಎಸ್ ಆರ್. ನರಸಿಂಹ ಭಟ್ ಮತ್ತು ಮನೋರಮಾ ದಂಪತಿ ಪುತ್ರರಾಗಿರುವ ಇವರು ಪತ್ನಿ ಶ್ರೀವಿದ್ಯಾ ಹಾಗೂ ಪುತ್ರಿಯಾದ ಈಶಾನಿ ಮತ್ತು ಶಿವಾನಿರವರೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here