ಪುತ್ತೂರು: ಮುಕ್ರಂಪಾಡಿಯ ಗೋಕುಲ ಬಡಾವಣೆಯಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ವಾಹನ ಪೂಜೆ, ಆಯುಧ ಪೂಜೆ ನಡೆಯಿತು.
ಆಯುಧ ಪೂಜೆಯ ಪ್ರಯುಕ್ತ ವಾಲಿ-ಸುಗ್ರೀವ ಕಾಳಗ ಎಂಬ ಯಕ್ಷಗಾನ ತಾಳಮದ್ದಳೆಯು ಸಂಯೋಜನೆಗೊಂಡಿತ್ತು. ಕಾರ್ಯಕ್ರಮವನ್ನು ದ್ವಾರಕಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ ರವರ ತಾಯಿ ಲಕ್ಷ್ಮೀ ಇವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಯಕ್ಷಗಾನ ತಾಳಮದ್ದಳೆಯ ಹಿಮ್ಮೇಳ ದಲ್ಲಿ ದ್ವಾರಕಾ ಪ್ರತಿಷ್ಠಾನದ ಯಕ್ಷಗಾನ ಗುರು ಲಕ್ಷ್ಮೀನಾರಾಯಣ ಭಟ್ಟ ಬಟ್ಯ ಮೂಲೆ ಹಾಗೂ ಶ್ರೀ ಆದಿತ್ಯ ಕೃಷ್ಣ ದ್ವಾರಕಾ ಭಾಗವತಿಕೆಯಲ್ಲಿ ಸಹಕರಿಸಿದರು. ಹಿಮ್ಮೇಳ ಗುರುಗಳಾದ ಗಿರೀಶ ಭಟ್ಟ ಕಿನಿಲ ಕೋಡಿ, ಕೃಷ್ಣಪ್ರಸಾದ ದಿವಾಣ, ಅಕ್ಷರಿ ದ್ವಾರಕಾ ಹಿಮ್ಮೇಳದಲ್ಲಿ ಸಹಕರಿಸಿದರು. ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿ ಗಣರಾಜ ಕುಂಬಳೆ, ಸರ್ಪಂಗಳ ಈಶ್ವರ ಭಟ್ ಹಾಗೂ ಈಶ್ವರ ಭಟ್ ಮುಮ್ಮೇಳದಲ್ಲಿ ಭಾಗವಹಿಸಿದರು. ವೇದಮೂರ್ತಿ ಕೃಷ್ಣ ಕುಮಾರ ಉಪಾಧ್ಯಾಯರು ವೈದಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಬಡಾವಣೆಯ ನಿವಾಸಿಗಳು, ಸಂಸ್ಥೆಯ ಸಿಬ್ಬಂದಿಗಳು ಹಾಗೂ ಬಂದು ಮಿತ್ರರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ದ್ವಾರಕಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ದ್ವಾರಕಾ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಅಮೃತ ಕೃಷ್ಣ ಗಣ್ಯರಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಧನ್ಯಶ್ರೀ ಮಿಂಚಿನಡ್ಕ ಧನ್ಯವಾದ ಸಮರ್ಪಿಸಿದರು. ಸಂಸ್ಥೆಯ ಸಿಬ್ಬಂದಿ ದುರ್ಗಾ ಗಣೇಶ್ ಕಾರ್ಯಕ್ರಮದ ನಿರೂಪಣೆ ನಡೆಸಿದರು.