ಪುತ್ತೂರು: ರೈಲ್ವೇ ನಿಲ್ದಾಣ ಮುಂಭಾಗದ ಸಂಕೀರ್ಣ ಹಾಗೂ ಪರ್ಲಡ್ಕದಲ್ಲಿ ವ್ಯವಹರಿಸುತ್ತಿರುವ ಜಯರಾಮ್ ಕುಲಾಲ್ ಮಾಲಕತ್ವದ ಜೆ.ಕೆ ಟೂರ್ ಆ್ಯಂಡ್ ಟ್ರಾವೆಲ್ಸ್ ಇದರ ವತಿಯಿಂದ ದಸರಾ,ನವರಾತ್ರಿ ಪ್ರಯುಕ್ತ ದ.ಕ. ಮತ್ತು ಉಡುಪಿ ಜಿಲ್ಲೆಯ ದೇವಾಲಯಗಳಿಗೆ ಒಂದು ದಿನದ ಪ್ರವಾಸ ಏರ್ಪಡಿಸಲಾಗಿತ್ತು.
ಅ.1ರಂದು ಶ್ರೀ ಮಹಾಲಿಂಗೇಶ್ವರ ದೇವಾಲಯದ ಬಳಿಯಿಂದ ಪ್ರವಾಸದ ಬಸ್ಸು ಹೊರಟು , ಪೊಳಲಿ ರಾಜಾರಾಜೇಶ್ವರಿ , ಕಟೀಲು ದುರ್ಗಾಪರಮೇಶ್ವರಿ , ಬಪ್ಪನಾಡು ಕ್ಷೇತ್ರ, ಮುಚ್ಚಿಲ್ಲ ಮಹಾಲಕ್ಷ್ಮಿ ಕ್ಷೇತ್ರ , ಆನೆಗುಡ್ಡೆ ವಿನಾಯಕ ದೇವಾಲಯ, ಮುರುಡೇಶ್ವರ ಮೊದಲೆಡೆ ಪ್ರವಾಸ ಕೈಗೊಳ್ಳಲಾಯಿತು. 35 ಮಂದಿ ಯಾತ್ರಾರ್ಥಿಗಳು ಪ್ರವಾಸದಲ್ಲಿ ಪಾಲ್ಗೊಂಡಿದ್ದರು.