





ಅಧ್ಯಕ್ಷ; ನೋಣಯ್ಯ ಪೂಜಾರಿ, ಕಾರ್ಯದರ್ಶಿ; ಲಿತಿನ್ಕುಮಾರ್


ನೆಲ್ಯಾಡಿ: ಕೊಣಾಲು ಗ್ರಾಮದ ಪಾಂಡಿಬೆಟ್ಟು ಶ್ರೀ ಶಿವಗಿರಿ ಅಯ್ಯಪ್ಪ ಭಜನಾ ಸೇವಾ ಸಂಘದ ಅಧ್ಯಕ್ಷರಾಗಿ ಎ.ನೋಣಯ್ಯ ಪೂಜಾರಿ ಅಂಬರ್ಜೆ ಹಾಗೂ ಕಾರ್ಯದರ್ಶಿಯಾಗಿ ಲಿತಿನ್ಕುಮಾರ್ ಮುಡ್ಪಿನಡ್ಕ ಆಯ್ಕೆಯಾಗಿದ್ದಾರೆ.





ಇತ್ತೀಚೆಗೆ ಭಜನಾಮಂದಿರದಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಕೆ.ಕುಮಾರನ್ ಪಾಂಡಿಬೆಟ್ಟು, ಉಪಾಧ್ಯಕ್ಷರಾಗಿ ಸುಂದರ ಗೌಡ ಎನ್.ಸುರಕ್ಷಾನಿಲಯ ಆರ್ಲ, ಉಪಕಾರ್ಯದರ್ಶಿಯಾಗಿ ವಿನಯ್ ಆರ್ಲ, ಪುರುಷೋತ್ತಮ ಬರೆಮೇಲು, ಖಜಾಂಜಿಯಾಗಿ ಬಾಬು ಪಿ.ಪಾಂಡಿಬೆಟ್ಟು ಆಯ್ಕೆಯಾದರು.
ಈ ಸಂದರ್ಭದಲ್ಲಿ ಡಿ.ಲಿಂಗಪ್ಪ ಗೌಡ ದರ್ಖಾಸು, ಲೋಕೇಶ್ ಪಿ.ದೇವಾಡಿಗ ಗಾಣದಕೊಟ್ಟಿಗೆ, ನೋಣಯ್ಯ ಗೌಡ ಡೆಬ್ಬೇಲಿ, ಡೊಂಬಯ್ಯ ಗೌಡ ಎಣ್ಣೆತ್ತೋಡಿ, ಉಮೇಶ್ ಗೌಡ ಸಂಕೇಶ, ದೇವಿಪ್ರಸಾದ್ ಕೊಣಾಲು, ಪ್ರವೀಣ್ ಗೌಡ ಮಣ್ಣಮಜಲು, ಸಂತೋಷ್ ಎಣ್ಣೆತ್ತೋಡಿ, ರೋಹಿತ್ ಎಣ್ಣೆತ್ತೋಡಿ, ವರುಣ್ ಗಾಣದಕೊಟ್ಟಿಗೆ, ಪ್ರೀತಮ್ ಮುಡ್ಪಿನಡ್ಕ, ಕಾರ್ತಿಕ್ ಎಣ್ಣೆತ್ತೋಡಿ, ಮನೋಜ್ ಎಣ್ಣೆತ್ತೋಡಿ ಮತ್ತಿತರರು ಉಪಸ್ಥಿತರಿದ್ದರು.









