ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನವರಾತ್ರಿ ಉತ್ಸವ ಸಂಪನ್ನ

0

ಬಡಗನ್ನೂರು : ಶ್ರೀ ಕ್ಷೇತ್ರ ಗೆಜ್ಜೆಗಿರಿ ಆದಿದೈವ ಧೂಮಾವತಿ, ಸಾಯನ ಬೈದ್ಯರ ಗುರುಪೀಠ ದೇಯಿಬೈದೈತಿ, ಕೋಟಿ-ಚೆನ್ನಯ ಮೂಲಸ್ಥಾನ ನಂದನಬಿತ್ತಲ್ ಶ್ರೀ ಕ್ಷೇತ್ರದಲ್ಲಿ ಸೆ.22  ಮೊದಲ್ಗೊಂಡು ಅ 2  ತನಕ  ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಮಹೋತ್ಸವ ನಡೆದು ಸಂಪನ್ನ ಗೊಂಡಿತು.

ಸೆ. 22 ರಂದು ಆರಂಭಗೊಂಡ ನವರಾತ್ರಿ ಉತ್ಸವದಲ್ಲಿ ಪ್ರತಿ ದಿನ ಶ್ರೀ ದೇವಿಗೆ  ವಿಶೇಷ ಅಲಂಕಾರ ಪೂಜೆ, ಅನ್ನದಾನ ಸೇವೆ, ನವರಾತ್ರಿ ಪೂಜೆ ನಡೆದು ಅ. 2  ವಿಜಯದಶಮಿ ಶುಭ ಸಂಧರ್ಭದಲ್ಲಿ ಬೆಳಗ್ಗೆ ಕ್ಷೇತ್ರ ತಂತಿವರ್ಯರಾದ ಶಿವಾನಂದ ಶಾಂತಿ ಮೂಡುಬಿದ್ರಿ ರವರ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಕದಿರು ತುಂಬಿಸುವುದು,  ಶಾರದ ಪೂಜೆ  ಶೀ ನಾರಾಯಣ ಗುರು ಪೂಜೆ, ಅಕ್ಷರಾಭ್ಯಾಸ ಕಾರ್ಯಕ್ರಮ ನಡೆದು  ಬಳಿಕ ವಾಹನ ಪೂಜೆ ಮಧ್ಯಾಹ್ನ ಶ್ರೀ ದೇವಿಗೆ ವಿಶೇಷ ಅಲಂಕಾರ ಪೂಜೆ, ಮಹಾಪೂಜೆ ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. 

ಈ ಸಂಧರ್ಭದಲ್ಲಿ ಕ್ಷೇತ್ರಾಢಳಿತ ಸಮಿತಿ ಗೌರವಾಧ್ಯಕ್ಷರಾದ ಪೀತಾಂಬರ ಹೇರಾಜೆ,  ಜಯಂತ ನಡುಬೈಲು, ಉಪಾಧ್ಯಕ್ಷರಾದ ಉಲ್ಲಾಸ್ ಕೋಟ್ಯಾನ್, ದೀಪಕ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್ ಜೊತೆ ಕಾರ್ಯದರ್ಶಿಳಾದ ಡಾ. ಸಂತೋಷ್ ಬೈರಂಪಲ್ಲಿ, ಜೈ ವಿಕ್ರಮ ಕಲ್ಲಾಪುಕೋಶಾಧಿಕಾರಿ ಮೋಹನ ದಾಸ್ ಬಂಗೇರ ವಾಮಂಜೂರು, ಪ್ರಮುಖರಾದ  ಸತೀಶ್ ಪೂಜಾರಿ ಬೆಳಪು (ದುಬೈ) ಪ್ರಭಾಕರ್ ಕರ್ನಿರೆ , ಸೋಮನಾಥ ಪೂಜಾರಿ ಉಡುಪಿ(ದಕ್ಷಿಣ ಆಫ್ರಿಕ) ಚಂದ್ರಹಾಸ ಅಮೀನ್ ಗೋವಾ, ಸುಜಿತಾ ವಿ ಬಂಗೇರ, ಸಂಜೀವ ಪೂಜಾರಿ ಬಿರುವ ಸೆಂಟರ್, ಪ್ರಾಮಲ್ ಕುಮಾರ್ ಕಾರ್ಕಳ, ಹರಿಶ್ಚಂದ್ರ ಅಮಿನ್ ಕಟಪಾಡಿ, ಶ್ರೀಕುಮಾರ್ ಮೂಡಬಿದ್ರಿ, ನಾರಾಯಣ ಮಚ್ಚಿನ, ನವೀನ್ ಅಮೀನ್ ಉಡುಪಿ, ನವೀನ್ ಸುವರ್ಣ ಸಜೀಪ, ನವನೀತ್ ಹಿಂಗಾಣಿ, ನಾಗೇಶ್ ಪೂಜಾರಿ ಜಯರಾಮ ಬಂಗೇರ, ಜಯರಾಮ ಪೂಜಾರಿ ಬೀಳುವಾಯಿ, ನಾಗೇಶ್ ಪೂಜಾರಿ ಬೈಕಂಪಾಡಿ, ರಾಘವೇಂದ್ರ, ಉಪಸ್ಥಿತರಿದ್ದರು

ನವರಾತ್ರಿ ಮಹೋತ್ಸವ ಈ ಸಂಧರ್ಭದಲ್ಲಿ ಊರಪರವೂರ ಸಾವಿರಾರು ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಭಜನಾ ಸಂಕೀರ್ತಣೆ 
ಶ್ರೀ ಮಹಮ್ಮಾಯಿ ಮಹಿಳಾ ಭಜನಾ ಮಂಡಳಿ ಕಣಿಯೂರು, ಶ್ರೀ ಕೊರಗಜ್ಜ ಸಮಿತಿ ಶಬರಿ ನಗರ ಬಾಲ ಭಜನಾ ಸಂಘ ಸುಳ್ಯಪದವು, ಮಹಾಲಕ್ಷ್ಮಿ ವನಿತಾ ಭಜನಾ ಮಂಡಳಿ ಸುಳ್ಯಪದವು, ಶ್ರೀ ಕ್ಷೇತ್ರ ಗೆಜ್ಜೆಗಿರಿ ಭಜನಾ ಸಂಘ, ಶ್ರೀ ಮೂಕಾಂಬಿಕಾ ಭಜನಾ ಸಂಘ ಭೈರವಗುಡ್ಡೆ ಮಯ್ಯಾಳ ಶ್ರೀ ಮಹಾಲಕ್ಷ್ಮಿ ಮಹಿಳಾ ಭಜನಾ ಮಂಡಳಿ ಶ್ರೀ ಶಬರಿ ಮಹಿಳಾ ಭಜನಾ ಸಂಘ ರೆಂಜ, ಶ್ರೀ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗ್ರಾಮ ಚಾವಡಿ ಕೋಣಾಜೆ ಮಂಗಳೂರು, ಬಿಲ್ಲವ ಸಂಘ ಕದ್ರಿ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ತಿರ್ಲೆ ಕೋಣಾಲು ಶ್ರೀ ದುರ್ಗಾ ಭಜನಾ ಸಂಘ ಶಾಂತಿಗೋಡು, ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಉಳಿ ಕಕ್ಕೆ ಪದವು ಶ್ರೀ ಸರ್ವಶಕ್ತಿ ಮಹಿಳಾ ಭಜನಾ ಮಂಡಳಿ ಪಡುಮಲೆ ಇದರ ಸದಸ್ಯರಿಂದ ಭಜನಾ ಸಂಕೀರ್ತಣೆ ಹಾಗೂ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.

ಗ್ರಾಮಸ್ಥರ ವತಿಯಿಂದ ವಿಶೇಷ ಪೂಜೆ 
ನವರಾತ್ರಿ ಮಹೋತ್ಸವ ಕಾರ್ಯಕ್ರಮದಲ್ಲಿ  ಪಡುವನ್ನೂರು ಗ್ರಾಮಸ್ಥರ ವತಿಯಲ್ಲಿ  ಧಾರ್ಮಿಕ ಮುಖಂಡ  ಪುತ್ತೂರು ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಹಾಗೂ ಜಯರಾಜ್ ಶೆಟ್ಟಿ ಸಹಭಾಗಿತ್ವದಲ್ಲಿ ಶ್ರೀ ಕ್ಷೇತ್ರದಲ್ಲಿ ಒಂದು ದಿವಸದ ವಿಶೇಷ ನವರಾತ್ರಿ ಪೂಜೆ ನಡೆಯಿತು. ಸುಮಾರು 150 ಕ್ಕೂ ಮಿಕ್ಕಿ ಗ್ರಾಮಸ್ಥರು ಭಾಗವಹಿಸಿ ಶ್ರೀ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here