ರೈತ ಸಂಘದಿಂದ ಅರಣ್ಯ ಇಲಾಖೆಯಿಂದ ಮಾಹಿತಿ ಕಾರ್ಯಾಗಾರ

0

ಅರಣ್ಯ ಭೂಮಿ ಒತ್ತುವರಿ ಮಾಡಿ ಕೃಷಿ ಮಾಡಿರುವ 700 ಪ್ರಕರಣಗಳಿವೆ-ಎಸಿಎಫ್ ಸುಬ್ಬಯ್ಯ

ಪುತ್ತೂರು: ದ.ಕ ಜಿಲ್ಲಾ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ ಅರಣ್ಯ ಇಲಾಖೆಯಿಂದ ಕಾಡು ಪ್ರಾಣಿಗಳ ಸಮಸ್ಯೆ, ತಪ್ಪಿಸಲು ಮಾರ್ಗೋಪಾಯ, ಕಳ್ಳಕಾಕರಿಂದ ಅರಣ್ಯ ಉಳಿಸುವ ಬಗ್ಗೆ ಮಾಹಿತಿ ಕಾರ್ಯಾಗಾರವು ಅ.4ರಂದು ಎಂ.ಟಿ ರಸ್ತೆಯ ಎಸ್‌ಕೆಸಿಎಂಎಸ್ ಕಟ್ಟಡದಲ್ಲಿರುವ ಜಿಲ್ಲಾ ಸಂಘದ ಕಚೇರಿಯಲ್ಲಿ ನಡೆಯಿತು.


ಮಾಹಿತಿ ನೀಡಿದ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ಮಾತನಾಡಿ, ಅರಣ್ಯ ಭೂಮಿ ಒತ್ತುವರಿ ಮಾಡಿ ಕೃಷಿ ಮಾಡುವುದು ಭವಿಷ್ಯದಲ್ಲಿ ಅಪಾಯವಾಗಿದೆ. ಇದರಿಂದ ಹಣ ವ್ಯರ್ಥವಾಗಲಿದೆ. ಒತ್ತುವರಿ ಮಾಡಿದ ಬಗ್ಗೆ 700 ಪ್ರಕರಣವಿದ್ದು, ಭವಿಷ್ಯದಲ್ಲಿ ಇದಕ್ಕೆ ಸೂಕ್ತ ಕ್ರಮವಾಗುತ್ತದೆ. ಪುತ್ತೂರು ವ್ಯಾಪ್ತಿಯಲ್ಲಿ ಮೂರು ಆನೆಗಳಿದ್ದು, ಸದ್ಯ ಕಾಡು ಸೇರಿಕೊಂಡಿದೆ. ಸರ್ಕಾರ ಆದೇಶ ಮಾಡಿದರೆ, ಮಂಗಳ ಹಾವಳಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.


ಅರಣ್ಯ ಪ್ರದೇಶದಿಂದ 100ಮೀ. ಬಫರ್ ಭೂಮಿಯಾಗಿ ಕಾಯ್ದಿರಿಸಲಾಗಿದೆ. ಅರಣ್ಯ ಗುಪ್ಪೆಯ ಒಳಗಿರುವ ಭೂಪ್ರದೇಶದಲ್ಲಿ ಚಟುವಟಿಕೆಗೆ ನಡೆಸಿದರೆ ಅರಣ್ಯ ಇಲಾಖೆ ಕಾನೂನು ಕ್ರಮಕ್ಕೆ ಮುಂದಾಗುತ್ತದೆ. ಕಾಡುಪ್ರಾಣಿಗಳಿಂದಾದ ಕೃಷಿ ಹಾನಿಗೆ ಇಲಾಖೆಯಿಂದ ರೂ.28ಲಕ್ಷ ಪರಿಹಾರ ರೈತರಿಗೆ ನೀಡಲಾಗಿದ್ದು, ರೂ.50ಲಕ್ಷ ಪರಿಹಾರ ಬಿಡುಗಡೆಗೆ ಕ್ರಮ ವಹಿಸಲಾಗಿದೆ. ಮರ ತೆರವಿನ ಬಗ್ಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ, ಇರುವ ರಸ್ತೆಯ ದುರಸ್ಥಿಗೆ ಅರಣ್ಯ ಇಲಾಖೆಯಿಂದ ಅನುಮತಿ ನೀಡಲಾಗುತ್ತದೆ ಎಂದರು.


ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಯು.ಕೆ.ಟಿ.ಸಿ. ಎಲ್. ವಿದ್ಯುತ್ ಮಾರ್ಗ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಪ್ರಮುಖರಾದ ಐತ್ತಪ್ಪ ರೈ, ಇದಿನಬ್ಬ ಬಂಟ್ವಾಳ, ಹೆನ್ರಿ ಡಿಸೋಜ, ಶಿವಚಂದ್ರ ಈಶ್ವರಮಂಗಲ, ಇಸುಬು ಪುಣಚ, ಹರ್ಷ ಜೈನ್ ಬಿಳಿಯೂರು, ತುಳಸಿ ಪೆರಾಬೆ, ಹರಿಣಾಕ್ಷಿ ಸಂಪ್ಯ, ಕಲ್ಪನಾ ಶೆಣೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here