ಪುತ್ತೂರು: ಜವುಳಿ ಉದ್ಯಮದಲ್ಲಿ ಸುದೀರ್ಘ 30 ವರ್ಷಗಳ ಇತಿಹಾಸವಿರುವ ಪುತ್ತೂರಿನ ಕೋರ್ಟ್‌ರಸ್ತೆಯಲ್ಲಿರುವ ರಾಧಾ’ಸ್ ಜವುಳಿ ಮಳಿಗೆಯಲ್ಲಿ ಸೀರೆ ಖರೀದಿಗೆ ಮಹಿಳೆಯರಿಗೆ ಇನ್ನಷ್ಟು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಸ್ತುತ ಇರುವ ಜವುಳಿ ಮಳಿಗೆಯ ಎರಡನೇ ಮಹಡಿಯಲ್ಲಿ ಪ್ರತ್ಯೇಕವಾಗಿ ಸೀರೆಗಳ ವಿಸ್ತೃತ ಮಳಿಗೆಯನ್ನು ಪ್ರಾರಂಭಿಸಲಾಗಿದ್ದು ಅ.6ರಂದು ಶುಭಾರಂಭಗೊಳ್ಳಲಿದೆ.

ಮದುವೆಯ ಸೀರೆಗಳ ಎಕ್ಸ್‌ಕ್ಲೂಸಿವ್ ಕಲೆಕ್ಷನ್ ಹೊಂದಿರುವ ರಾಧಾ’ಸ್ ಮಳಿಗೆಯು ಮದುವೆ ಸೀರೆಗಳ ಉತ್ತಮ ಆಯ್ಕೆಗೆ ರಾಧಾಸ್ ಪ್ರಥಮ ಆಯ್ಕೆಯಾಗಿದೆ. ಮದುವೆಯ ಶೃಂಗಾರಕ್ಕೆ ಮನಮೋಹಕ ಸೀರೆಗಳ ಅಪೂರ್ವ ಸಂಗ್ರಹವು ಮಳಿಗೆಯಲ್ಲಿದೆ. ಪ್ರತಿ ದಿನ ಮದುವೆ ಜವುಳಿಯ ಹೊಸ ಸಂಗ್ರಹವಿರುವ ಪುತ್ತೂರಿನ ಏಕೈಕ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಸ್ತೃತ ಮಳಿಗೆಯಲ್ಲಿ ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ತಯಾರಾಗುವ ಎಲ್ಲಾ ಮಾದರಿಯ ಸೀರೆಗಳು ವಿಸ್ತೃತ ಮಳಿಗೆಯಲ್ಲಿ ಒಂದೇ ಸೂರಿನಡಿ ದೊರೆಯಲಿದೆ. ಕನಿಷ್ಠ ರೂ.195ರಿಂದ ಪ್ರಾರಂಭಗೊಂಡು ಗರಿಷ್ಠ ರೂ.40,೦೦೦ ವರೆಗಿನ ಬೆಲೆಯ ಸೀರೆಗಳು ಮಳಿಗೆಯಲ್ಲಿ ಲಭ್ಯವಿದೆ. ರೇಷ್ಮೆ ಸೀರೆಯಂತಹ ಬೆಲೆ ಬಾಳುವ ಸೀರೆಗಳು ಮಳಿಗೆಯಲ್ಲಿ ಲಭ್ಯವಿದೆ.
1995ರಲ್ಲಿ ಕೋರ್ಟುರಸ್ತೆಯಲ್ಲಿ ಸಣ್ಣ ಅಂಗಡಿಯೊಂದರಲ್ಲಿ ಪ್ರಾರಂಭವಾದ ಜವುಳಿ ಉದ್ಯಮವು ಪುತ್ತೂರು ಜನತೆಯ ಅಗತ್ಯತೆಗಳಿಗೆ ತಕ್ಕಂತೆ ಉತ್ತಮ ಸೇವೆ ನೀಡುತ್ತಾ ಯಶಸ್ವಿಯಾಗುತ್ತಾ ಸಾಗಿದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ 2005ರಲ್ಲಿ ಮಳಿಗೆಯನ್ನು ವಿಸ್ತರಿಸಿ, ಅದೇ ಕಟ್ಟಡದ ಮೇಲಂತಸ್ಥಿನಲ್ಲಿ ಮಳಿಗೆಯೊಂದನ್ನು ಪ್ರಾರಂಭಿಸಿದೆ. ತನ್ನ ವಿಶೇಷ ಸೇವೆಯ ಮೂಲಕ ಪುತ್ತೂರು ಮಾತ್ರವಲ್ಲದೇ ನೆರೆಹೊರೆಯ ತಾಲೂಕುಗಳಲ್ಲಿಯೂ ಮನೆ ಮಾತಾಗಿರುವ ರಾಧಾ’ಸ್ ತನ್ನ ಗ್ರಾಹಕರಿಗೆ ಇನ್ನಷ್ಟು ಸೇವೆ ನೀಡುವ ನಿಟ್ಟಿನಲ್ಲಿ 2012ರಲ್ಲಿ ವಿಸ್ತತ ಮಳಿಗೆಯನ್ನು ಪ್ರಾರಂಭಿಸಿದೆ. ಮೂರು ಅಂತಸ್ತಿನ ಮಳಿಗೆಯಲ್ಲಿ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಉಡುಪುಗಳ ಪ್ರತ್ಯೇಕ ವಿಭಾಗಗಳಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದು ಜಿಲ್ಲೆಯಾದ್ಯಂತ ತನ್ನ ಛಾಪು ಮೂಡಿಸಿರುವ ಮಳಿಗೆ ಇದೀಗ ಎರಡನೇ ಮಹಡಿಯಲ್ಲಿ ಸೀರೆಗಳ ವಿಸ್ತೃತ ಮಳಗೆ ಪ್ರಾರಂಭಿಸಿದ್ದು ಗ್ರಾಹಕರಿಸಿಗೆ ಇನ್ನಷ್ಟು ಅನುಕೂಲವಾಗಲಿದೆ.
ನೂತನ ವಿಸ್ತೃತ ಮಳಿಗೆಯನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಉದ್ಯಮಿ ಸಹಜ್ ರೈ ಬಳೆಜ್ಜ, ವಿವಿಧ ಧರ್ಮಗಳ ಮುಖಂಡರು ಹಾಗೂ ಮಳಿಗೆ ಬ್ರಾಂಡ್ ಅಂಬಾಸಿಡರ್ ಆಗಿರುವ ದಾರಾವಾಹಿ ನಟಿ ಶಿಲ್ಪಾ ಕಾಮತ್ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಆಫರ್‌ಗಳ ಬಿಗ್‌ಬಾಸ್ ರಾಧಾ’ಸ್ ಉತ್ಸವ್:
ಪುತ್ತೂರಿನ ಜೊತೆಗೆ ಹತ್ತೂರಿನ ಜನತೆಯ ಮೆಚ್ಚುಗೆಗೆ ಪಾತ್ರವಾಗಿರುವ ಪ್ರತಿಷ್ಠಿತ ಜವುಳಿ ಮಳಿಗೆಯಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಮಾನ್ಸೂನ್ ಆಫರ್ ಹಾಗೂ ವಾರ್ಷಿಕೋತ್ಸವದ ಅಂಗವಾಗಿ ಗ್ರಾಹಕರಿಗೆ ಕೊಡುಗೆಗಳನ್ನು ನೀಡುತ್ತಿದೆ. ಇದೀಗ ಜವುಳಿ ಖರೀದಿಯ ಜೊತೆಗೆ ಭರ್ಜರಿ ಬಹುಮಾನಗಳನ್ನು ಗೆಲ್ಲುವ ಆಫರ್‌ಗಳ ಬಿಗ್‌ಬಾಸ್ ರಾಧಾ’ಸ್ ಉತ್ಸವವು ಅ.3 ರಿಂದ ಪ್ರಾರಂಭಗೊಂಡಿದ್ದು ಅ.31ರ ತನಕ ನಡೆಯಲಿದೆ. ರಾಧಾ’ಸ್ ಉತ್ಸವದಲ್ಲಿ ಜವುಳಿ ಖರೀದಿಗೆ ವಿಶೇಷ ರಿಯಾಯಿತಿಯೊಂದಿಗೆ ರೂ.3,999ರ ಜವುಳಿ ಖರೀದಿಗೆ ಗಿಫ್ಟ್ ಕೂಪನ್ ನೀಡಲಾಗುತ್ತಿದೆ. ಗ್ರಾಹಕರಿಗೆ ಪ್ರತಿ ಶುಕ್ರವಾರ ಕೂಪನ್‌ಗಳ ಡ್ರಾ ನಡೆಯಲಿದೆ. ವಿಜೇತರಿಗೆ ಪ್ರಥಮ, ದ್ವಿತೀಯ. ತೃತೀಯ ಬಹುಮಾನಗಳ ಜೊತೆಗೆ ಆಕರ್ಷಕ ಬಹುಮಾನಗಳು ಸೇರಿದಂತೆ 10 ಬಹುಮಾನಗಳನ್ನು ನೀಡಲಾಗುತ್ತಿದೆ. ತಿಂಗಳಾಂತ್ಯಕ್ಕೆ ಬಂಪರ್ ಡ್ರಾ ನಡೆಯಲಿದೆ. ಬಂಪರ್ ಡ್ರಾ.ದಲ್ಲಿ ವಿಜೇತರಾದವರಿಗೆ ಟಿವಿಎಸ್ ಜ್ಯುಪಿಟರ್ ದ್ವಿಚಕ್ರ ವಾಹನ ಗೆಲ್ಲುವ ಅವಕಾಶವಿದೆ. ಈ ಕೊಡುಗೆಗಗಳ ಅ.3ರಿಂದ ಪ್ರಾರಂಭಗೊಂಡು ಅ.31ರ ತನಕ ದೊರೆಯಲಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.