ನಿಡ್ಪಳ್ಳಿ; ಇಲ್ಲಿಯ ಹೋಲಿ ರೊಜಾರಿಯೊ ಚರ್ಚ್ ಬಳಿಯಿಂದ ರೆಂಜದವರೆಗಿನ ಮುಖ್ಯ ರಸ್ತೆ ಬದಿ ಇದ್ದ ಹುಲ್ಲು ಪೊದರುಗಳನ್ನು ತೆಗೆಯುವ ಮೂಲಕ ಅ.5ರಂದು ಕ್ರೈಸ್ತ ಬಾಂಧವರು ಸೇರಿ ಸ್ವಚ್ಚತಾ ಕಾರ್ಯಕ್ರಮ ನಡೆಸಿದರು.
ಚರ್ಚ್ ನ ವಾರ್ಷಿಕ ಹಬ್ಬದ ಪ್ರಯುಕ್ತ ನಡೆದ ಈ ಕಾರ್ಯಕ್ರಮ ಚರ್ಚ್ ಗುರುಗಳಾದ ವಂ. ಸಂತೋಷ್ ಮಿನೇಜಸ್ ಇವರ ನೇತೃತ್ವದಲ್ಲಿ ನಡೆಸಲಾಯಿತು.
