





ಬೆಂಗಳೂರು: 1944ರಲ್ಲಿ ಆರಂಭಗೊಂಡು ಕಳೆದ 81 ವರ್ಷಗಳಿಂದ ಶ್ರೇಷ್ಠತೆಯ ಪ್ರಯಾಣದೊಂದಿಗೆ ಆಭರಣ ಕ್ಷೇತ್ರದಲ್ಲಿ ವಿಶ್ವಾಸಾರ್ಹತೆ ಪಡೆದುಕೊಂಡಿರುವ ಮುಳಿಯ ಗೋಲ್ಡ್ – ಡೈಮಂಡ್ಸ್ ಇದರ ವಿಸ್ತೃತ ಶೋರೂಂ ಬೆಂಗಳೂರು ಡಿಕೆನ್ಸನ್ ರಸ್ತೆಯ ಮಣಿಪಾಲ್ ಸೆಂಟರ್‌ನಲ್ಲಿ ಅ.5ರಂದು ಉದ್ಘಾಟನೆಗೊಂಡಿತು.



ವಿಸ್ತೃತ ಶೋರೂಮ್ ಅನ್ನು ಖ್ಯಾತ ಸಿನಿಮಾ ನಟ ಡಾ| ರಮೇಶ್ ಅರವಿಂದ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮುಳಿಯ ಜ್ಯುವೆಲ್ಸ್ನ 1001ನೇ ಗ್ರಾಹಕನಾಗಿರುವುದು ನನಗೆ ಸಂತೋಷ ತಂದಿದೆ. ಇದು ಮುಳಿಯ ಜ್ಯುವೆಲ್ಸ್ನವರ ಮುಂದಿನ ಪ್ರಯಾಣಕ್ಕೆ ಹೊಸ ಆರಂಭ ಸೂಚಿಸುತ್ತದೆ ಎಂದು ಹೇಳಿದರು.






ಮುಳಿಯ ಜ್ಯುವೆಲ್ಸ್ನ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ಅವರು ಮಾತನಾಡಿ, ಎಂಟು ದಶಕಗಳಿಗೂ ಹೆಚ್ಚು ಕಾಲ ಮುಳಿಯ ಜ್ಯುವೆಲ್ಸ್ ಶುದ್ಧತೆ, ನಂಬಿಕೆ ಮತ್ತು ಕಾಲಾತೀತ ಕರಕುಶಲತೆಯನ್ನು ಪ್ರತಿನಿಧಿಸಿದೆ. ನಮ್ಮ ಬೆಂಗಳೂರಿನ ವಿಸ್ತೃತ ಶೋ ರೂಂನಲ್ಲಿ ಗ್ರಾಹಕರ ಹಾಜರಾತಿ ನೋಡಿ ನಮಗೆ ಸಂತೋಷವಾಗಿದೆ. ಇದು ನಮ್ಮ ಮೌಲ್ಯಯುತ ಪೋಷಕರ ನಿರಂತರ ನಂಬಿಕೆ ಮತ್ತು ಬೆಂಬಲವನ್ನು ಪ್ರತಿಬಿಂಬಿಸುತ್ತದೆ ಎಂದರು.

ಸುಬ್ರಹ್ಮಣ್ಯ ಭಟ್, ವೇಣು ಶರ್ಮಾ, ಬಿಗ್ ಬಾಸ್ ಕನ್ನಡ ಧ್ವನಿ ಕಲಾವಿದ ಬಡೆಕ್ಕಿಲ ಪ್ರದೀಪ್, ಕೃಷ್ಣನಾರಾಯಣ ಮುಳಿಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್
ವಿಸ್ತೃತ ಶೋರೂಂ ಉದ್ಘಾಟನೆಗೊಂಡ ದಿನ 1,000ಕ್ಕೂ ಹೆಚ್ಚು ಗ್ರಾಹಕರನ್ನು ಸ್ವಾಗತಿಸಿದ ಈ ಕಾರ್ಯಕ್ರಮ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಪ್ರವೇಶಿಸಿತು. ಇದು ಮುಳಿಯ ಜ್ಯುವೆಲ್ಸ್ನವರ ಕಲಾತ್ಮಕತೆ ಮತ್ತು ನಾವೀನ್ಯತೆಯ ಪರಂಪರೆಯನ್ನು ದೃಢಪಡಿಸಿತು. ವಿಶಿಷ್ಟ ಮತ್ತು ಹಗುರವಾದ ವಿನ್ಯಾಸಗಳಿಗೆ ಹೆಸರುವಾಸಿಯಾದ ಮುಳಿಯ ಆಭರಣ ಕರಕುಶಲತೆಯಲ್ಲಿ ಮಾನದಂಡಗಳನ್ನು ಸ್ಥಾಪಿಸುವುದನ್ನು ಮುಂದುವರೆಸಿದೆ.












