





ವಿವಿಧ ಆಟೋಟ ಸ್ಪರ್ಧೆಗಳ ಆಮಂತ್ರಣ ಅನಾವರಣ


ಕಾಣಿಯೂರು: ಪುಣ್ಚತ್ತಾರು ಶ್ರೀ ಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಇದರ 13ನೇ ವರ್ಷದ ದೀಪಾವಳಿ ಹಬ್ಬದ ಪ್ರಯುಕ್ತ ಅ.19ರಂದು ನಡೆಯಲಿರುವ ಪ್ರೋ ವಾಲಿಬಾಲ್ ಪಂದ್ಯಾಟ, ವಿವಿಧ ಆಟೋಟ ಸ್ಪರ್ಧೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಅಶಕ್ತ ಬಡ ಕುಟುಂಬಗಳಿಗೆ ಸಹಾಯಧನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ಪುಣ್ಚತ್ತಾರು ಶ್ರೀ ಹರಿ ಸಭಾಭವನದಲ್ಲಿ ನಡೆಯಿತು.





ಶ್ರೀ ಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹರೀಶ್ ಪೈಕ ಕಟೀಲು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲು ಸದಸ್ಯರ ಸಹಕಾರ ಅಗತ್ಯ ಎಂದರು. ಕ್ಲಬ್ ನ ಸದಸ್ಯ ದಿನೇಶ್ ಮಾಳ ಸ್ವಾಗತಿಸಿ,ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಮೋನಪ್ಪ ಬಂಡಾಜೆ ವಂದಿಸಿದರು. ಕ್ರೀಡಾ ಕಾರ್ಯದರ್ಶಿ ಪ್ರಶಾಂತ್ ಪೈಕ ಕಾರ್ಯಕ್ರಮ ನಿರೂಪಿಸಿದರು.
ಕೋಶಾಧಿಕಾರಿ ಮಾಧವ ಕಲ್ಪಡ, ಜತೆ ಕಾರ್ಯದರ್ಶಿ ಮಿಥುನ್ ಪೈಕ, ಸ್ಥಾಪಕ ಅಧ್ಯಕ್ಷ ರಾಧಾಕೃಷ್ಣ ಪೈಕ, ಪ್ರೋ ವಾಲಿಬಾಲ್ ಪಂದ್ಯಾಟದಲ್ಲಿ ಪಾಲ್ಗೊಳ್ಳುವ ತಂಡಗಳ ಮಾಲಕರಾದ ರಾಧಾಕೃಷ್ಣ ಏಲಡ್ಕ, ದಿನೇಶ್ ಕಾನಾವು, ನಂದನ್ ಕಜೆ, ನೇಮಿರಾಜ್ ಕಡೀರ, ಅಭಿಲಾಷ್ ಬೀಜತಡ್ಕ, ಮಜೀದ್ ಪುಣ್ಚತ್ತಾರು, ವಿಜೇತ್ ಕುಂಡಾಲ, ಭವಿಷ್ ಕರಿಮಜಲು, ವಿಶ್ವನಾಥ ರೈ ಮಾಳ, ಕಾಯಿಮಣ ಕೃಷ್ಣಾಪುರ ಜೋಕಾಲಿ ಬಳಗದ ಅಧ್ಯಕ್ಷ ಚಂದ್ರಶೇಖರ ಮುಂಡಾಳ, ಸದಸ್ಯರಾದ ನಿತಿನ್ ಮುಂಡಾಳ, ಭವಿತ್ ಮುಂಡಾಳ, ನಿಶಾಂತ್ ಮುಂಡಾಳ, ಶ್ರೀ ಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರಾದ ಅಶ್ಲೇಷ್ ದೋಳ್ಪಾಡಿ, ಪ್ರಶಾಂತ್ ಬಾರೆತ್ತಡಿ, ಅಂಬರೀಷ್ ಬೀಜತ್ತಡ್ಕ, ದಿನೇಶ್ ಪೈಕ, ಧರ್ಮಪಾಲ ಅನೋವುಗುಡ್ಡೆ, ಅಶ್ವಿನ್ ಕರಿಮಜಲು, ಶಿವಪ್ಪ ಬಂಡಾಜೆ, ರಾಕೇಶ್ ಕರಿಮಜಲು, ದಯಾನಂದ ಅಬ್ಬಡ, ನವನ್ ಅಬ್ಬಡ, ರಂಜಿತ್ ಬೀರ್ನೇಲು, ವಿನ್ಯಾಸ್ ಅಬ್ಬಡ, ಗಿರೀಶ್ ಮಾಳ, ಉಮೇಶ್ ಪೈಕ, ಅನಿಲ್ ಕರಿಮಜಲು, ಧರ್ಮಪಾಲ ಬೆದ್ರಂಗಳ, ರವೀಂದ್ರ ಅನಿಲ, ಮೇದಪ್ಪ ಮಾನ್ಯಡ್ಕ ಮತ್ತಿತರರು ಉಪಸ್ಥಿತರಿದ್ದರು.










