ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ದ.ಕ ಈಸ್ಟ್ ಜಿಲ್ಲಾ ಮುಖಂಡ ಬನ್ನೂರು ಕೆ.ಎಚ್ ಅಬ್ದುಲ್ಲ ಮುಸ್ಲಿಯಾರ್ ಅವರ ಪುತ್ರರಾದ ಆಮಿರ್ ಅಶ್ಅರೀ ಬನ್ನೂರು ಅವರ ವಿವಾಹವು ಗೋಳಿತೊಟ್ಟು ನಿವಾಸಿ ಆದಂ ಅವರ ಪುತ್ರಿ ಸೌದತ್ ಅಲ್ ಝಾಹಿರಾ ಜೊತೆ ಹಾಗೂ ಹಾಶಿಂ ಅಮ್ಜದಿ ಬನ್ನೂರು ಅವರ ವಿವಾಹವು ಮಾಡನ್ನೂರು ನಿವಾಸಿ ದಿ.ಇಬ್ರಾಹಿಂ ಅವರ ಪುತ್ರಿ ಹಲೀಮತ್ ನುಸೈಬತ್ ಜೊತೆ ಸುರಿಬೈಲ್ ದಾರುಲ್ ಅಶ್ಅರಿಯಾ ಸಂಸ್ಥೆಯಲ್ಲಿ ನಡೆಯಿತು.
ಸಮಸ್ತ ಕೇರಳ ಜಂಮ್ಯಿಯತ್ತುಲ್ ಉಲಮಾ ಪ್ರದಾನ ಕಾರ್ಯದರ್ಶಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಅವರು ನಿಕಾಹ್ ಕಾರ್ಯ ನೆರವೇರಿಸಿದರು.