ಪುತ್ತೂರು: ಸೆ.30 ರಂದು ನಿಧನರಾದ ಸಿಂಡಿಕೇಟ್ ಬ್ಯಾಂಕ್ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಕಬಕ ನಿವಾಸಿ ಶ್ರೀನಿವಾಸ ನಾಯ್ಕ್ ಕರ್ಗಲ್ಲುರವರ ಶ್ರದ್ದಾಂಜಲಿ ಸಭೆ ಕಬಕ ಶ್ರೀ ಮಹಾದೇವಿ ದೇವಸ್ಥಾನದ ಸಭಾಭವನದಲ್ಲಿ ಅ.11 ರಂದು ನಡೆಯಿತು.

ಮೃತರ ಸಹೋದರ ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಡಿವಿಷನಲ್ ಮ್ಯಾನೇಜರ್ ಚಂದ್ರು ಚಿಕ್ಕಪುತ್ತೂರು ನುಡಿನಮನ ಸಲ್ಲಿಸಿ ಮಕ್ಕಳಿಗೆ ಒಳ್ಳೆಯ ವಿದ್ಯೆ ಸಂಸ್ಕಾರವನ್ನು ಕೊಟ್ಟು ಬೆಳೆಸಿ ಕುಟುಂಬದಲ್ಲಿ ಸಮಾಜದಲ್ಲಿ ಎಲ್ಲರ ಪ್ರೀತಿ ವಿಶ್ವಾಸಗಳಿಸಿ ಎಲ್ಲರಿಗೂ ಆದರ್ಶರಾಗಿ ಬಾಳಿದ ನಮ್ಮ ಸಹೋದರನ ದಿವ್ಯಾತ್ಮ ಭಗವಂತನ ಸನ್ನಿದಿಯಲ್ಲಿ ಚಿರಶಾಂತಿಯಲ್ಲಿರಲಿ ಎಂದು ಪ್ರಾರ್ಥಿಸಿದರು. ನಂತರ ಮೃತರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು ಬಳಿಕ ಶ್ರೀನಿವಾಸ ನಾಯ್ಕ್ರವರ ಭಾವ ಚಿತ್ರಕ್ಕೆ ಬಂಧುಮಿತ್ರರು ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಮೃತರ ಪತ್ನಿ ಪದ್ಮಾವತಿ ಪುತ್ರರಾದ ನವೀನ್ ಕುಮಾರ್, ನಿತಿನ್ ಕುಮಾರ್,ಜೀವನ್ ಕುಮಾರ್, ಗಣೇಶ್ ಕುಮಾರ್, ಸೊಸೆಯಂದಿರಾದ ಅನಿತಾ, ವಿದ್ಯಾ, ಜಲಜಾ, ರಂಜಿತಾ, ಮೊಮ್ಮಕ್ಕಳು ಕುಟುಂಬಸ್ಥರು ಉಪಸ್ಥಿತರಿದ್ದರು.