ಶ್ರೀ ಸಾಯಿ ಕೊಂಚಾಡಿ–ಟ್ವಿನ್ಸ್ ಟ್ರೋಫಿ ಸೀಸನ್ 3ರ ಅಂಡರ್‌ಆರ್ಮ್ ಕ್ರಿಕೆಟ್ ಚಾಂಪಿಯನ್ – 2025

0

ಪುತ್ತೂರು: ಅ.12ರಂದು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ನ ಅಜ್ಮಾನ್‌ನ ರಾಯಲ್ ಸ್ಪೋರ್ಟ್ಸ್‌ನಲ್ಲಿ ನಡೆದ ಟ್ವಿನ್ಸ್ ಟ್ರೋಫಿ ಅಂಡರ್‌ಆರ್ಮ್ ಕ್ರಿಕೆಟ್ ಟೂರ್ನಿ – ಸೀಸನ್ 3 ಯಶಸ್ವಿಯಾಗಿ ಸಂಪನ್ನವಾಯಿತು. 16 ಪ್ರಬಲ ತಂಡಗಳ ಕಠಿಣ ಸ್ಪರ್ಧೆಯ ನಡುವೆ ಶ್ರೀ ಸಾಯಿ ಕೊಂಚಾಡಿ ತಂಡವು ವಿಜೇತರಾಗಿ ಹೊರಹೊಮ್ಮಿದೆ. ವೈಎಫ್‌ಸಿ ಕಣ್ಣೂರು ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಶಕೀರ್ ಪ್ರಶಸ್ತಿ ಪಡೆದರೆ, ಮೋಸ್ಟ್ ವಾಲ್ಯೂಬಲ್ ಪ್ಲೇಯರ್ ಆಗಿ ಅರ್ಷದ್ ಬಜಾಲ್ ಪ್ರಶಸ್ತಿ ಸ್ವೀಕರಿಸಿದರು. ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿ ನಜೀರ್ ಚೆರುಗೋಳಿ, ಶ್ರೇಷ್ಠ ಬೌಲರ್ ಆಗಿ ಅರ್ಷದ್ ಬಜಾಲ್, ಶ್ರೇಷ್ಠ ಫೀಲ್ಡರ್ ಆಗಿ ರತುಷ್ ಪೂಜಾರಿ ಪ್ರಶಸ್ತಿ ಪಡೆದುಕೊಂಡರು. ಈ ಟೂರ್ನಿ ಸ್ಥಳೀಯ ಕ್ರಿಕೆಟ್ ಪ್ರತಿಭೆಗಳಿಗೆ ವೇದಿಕೆ ನೀಡಿದೆಯಲ್ಲದೆ, ಸಮುದಾಯದ ಐಕ್ಯತೆಯನ್ನು ಬಲಪಡಿಸಿದೆ. ಆಟಗಾರರು, ಪ್ರಾಯೋಜಕರು, ಕ್ರಿಕೆಟ್‌ ಅಭಿಮಾನಿಗಳು, ವಿಜೇತ ಶ್ರೀ ಸಾಯಿ ಕೊಂಚಾಡಿ ತಂಡ ಟೂರ್ನಿಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಸಂಘಟಕರು ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here