ಪ್ರಗತಿ ಸ್ಟಡಿ ಸೆಂಟರ್ ಸೈನಿಕ ಶಾಲೆಗೆ ಪ್ರವೇಶ ಪರೀಕ್ಷೆಗೆ (AISSEE) ತರಬೇತಿ ತರಗತಿಗಳು ಆರಂಭ

0


ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ 19 ವರ್ಷಗಳಿಂದ ಸೈನಿಕ ತರಬೇತಿ ತರಗತಿಗಳನ್ನು ನೀಡುತ್ತಾ ಬಂದಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 5 ಮತ್ತು 8ನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿಗಳು ಕೂಡಲೇ ಸಂಪರ್ಕಿಸಿ ಇದರ ಸದುಪಯೋಗ ಪಡೆದುಕೊಂಡು ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದಲ್ಲಿ ರಾಷ್ಟ್ರೀಯ ಪರೀಕ್ಷ ಪ್ರಾಧಿಕಾರ(ಎನ್.ಟಿ.ಎ) ಭಾರತದದ್ಯಾಂತ ಇರುವ ಸೈನಿಕ ಶಾಲೆಗಳಲ್ಲಿ 6ರಿಂದ 12ನೇ ತರಗತಿಗಳಿಗೆ ಸಿ.ಬಿ.ಎಸ್.ಇ ಪಠ್ಯಕ್ರಮದಲ್ಲಿ ಉಚಿತ ವಸತಿಯುತ ಶಿಕ್ಷಣವನ್ನು ಪಡೆಯಬಹುದಾಗಿದೆ.

ಈ ಪರೀಕ್ಷೆಗೆ ಅರ್ಜಿ ಸಲ್ಲಿಕೆಯು 10 ಅಕ್ಟೋಬರ್ 2025ರಿಂದ ಪ್ರಾರಂಭಗೊಂಡಿದ್ದು, ಅರ್ಜಿಸಲ್ಲಿಸಲು ಕೊನೆಯ ದಿನಾಂಕ 30 ಅಕ್ಟೋಬರ್ 2025 ಹಾಗೂ 2026ರ ಜನವರಿ ತಿಂಗಳಿನಲ್ಲಿ ಪರೀಕ್ಷೆಯು ನಡೆಯಲಿದೆ. ಆಸ್ತಕ ವಿದ್ಯಾರ್ಥಿಗಳ ಪೋಷಕರು ಧರ್ಮಸ್ಥಳ ಕಟ್ಟಡ 2ನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನ ಕಛೇರಿಗೆ ಮುಖತಃ ಬಂದು ಮಾತನಾಡಬಹುದು ಅಥವಾ 9900109490 ಸಂಪರ್ಕಿಸಬಹುದು. ಕಛೇರಿಯ ಸಮಯ ಬೆಳಿಗ್ಗೆ 9.00 ರಿಂದ ಸಂಜೆ 3.30ರವರೆಗೆ ತೆರೆದಿರುತ್ತದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಕೆ. ಹೇಮಲತಾ ಗೋಕುಲ್‌ನಾಥ್ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here